ರಾಷ್ಟ್ರೀಯ

ಕೃಷಿ ಭೂಮಿ ಸ್ವಾಧೀನ: ಸಾಯಲು ಅನುಮತಿ ಕೋರಿದ 5,000 ಗುಜರಾತ್‌ ರೈತರು

Pinterest LinkedIn Tumblr


ಅಹ್ಮದಾಬಾದ್‌ : ಸರಕಾರದ ವಿದ್ಯುತ್‌ ಯೋಜನೆಗಳಿಗಾಗಿ ತಮ್ಮ ಕೃಷಿ ಭೂಮಿಯನ್ನು ಸರಕಾರ ಬಲವಂತದಿಂದ ವಶಪಡಿಸಿಕೊಳ್ಳುವ ಭೀತಿಗೆ ಗುರಿಯಾಗಿರುವ ಗುಜರಾತ್‌ನ ಭಾವನಗರ ಜಿಲ್ಲೆಯ ಐದು ಸಾವಿರಕ್ಕೂ ಅಧಿಕ ರೈತರು ತಮಗೆ ಸಾಯಲು ಅನುಮತಿ ಕೊಡಬೇಕೆಂದು ಕೋರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ರೈತರ ಹಕ್ಕುಗಳಿಗಾಗಿ ಹೋರಾಡುವ ಗುಜರಾತ್‌ ಖೇದೂತ್‌ ಸಮಾಜ್‌ ಸಂಘಟನೆಯ ಓರ್ವ ಸದಸ್ಯರಾಗಿರುವ ಸ್ಥಳೀಯ ರೈತ ನರೇಂದ್ರಸಿನ್ಹ ಗೋಹಿಲ್‌ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “12 ಬಾಧಿತ ಗ್ರಾಮಗಳ ರೈತರು ಮತ್ತು ಅವರ ಕುಟುಂಬದವರನ್ನು ಒಳಗೊಂಡ 5,259 ಮಂದಿ, ತಮ್ಮ ಕೃಷಿ ಭೂಮಿಯನ್ನು ಸರಕಾರ ಬಲವಂತದಿಂದ, ವಿದ್ಯುತ್‌ ಯೋಜನೆಗಳಿಗೆಂದು ಸ್ವಾಧೀನ ಪಡಿಸಿಕೊಳ್ಳುತ್ತಿರುವುದರಿಂದ ತಮಗೆ ಇಚ್ಛಾ ಮೃತ್ಯು (ಸಾಯುವ ಹಕ್ಕು) ಕೋರಿದ್ದಾರೆ’ ಎಂದು ಹೇಳಿದರು.

-ಉದಯವಾಣಿ

Comments are closed.