ರಾಷ್ಟ್ರೀಯ

ತಲೆಬುರುಡೆಯನ್ನೇ ಛೇದಿಸಿದ ಕಾರು ಕೀ!

Pinterest LinkedIn Tumblr


ಅಹ್ಮದ್‌ನಗರ: ಜಗಳದ ವೇಳೆ ಕಾರು ಕೀಯಿಂದ ತಲೆಗೆ ಚುಚ್ಚಿದ ಪರಿಣಾಮ ತಲೆಬುರುಡೆಯೇ ತೂತಾದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿ ನಡೆದಿದೆ.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಅಹ್ಮದ್‌ನಗರದ ಗೋಡೆಗಾಂವ್‌ ಚೌಕ್‌ನಲ್ಲಿ ಮೂವರು ಯುವಕರು ಮತ್ತು 25 ವರ್ಷದ ಪ್ರತೀಕ್‌ ಆರನ್‌ ಜಗಳವಾಡಿದ್ದಾರೆ. ಈ ವೇಳೆ ಓರ್ವ ಸಿಟ್ಟಿನಿಂದ ಕಾರಿನ ಕೀಯಿಂದ ಪ್ರತೀಕ್‌ ತಲೆಗೆ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ತಲೆಯೊಳಗೆ ಕೀ ಬಾಕಿಯಾಗಿದೆ.

ತಕ್ಷಣ ಕುಸಿದು ಬಿದ್ದ ಪ್ರತೀಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್‌ ತಲೆಬುರುಡೆಯೊಳಗೆ ರಕ್ತಸ್ರಾವಗೊಂಡಿಲ್ಲ. ಮಿದುಳಿಗೂ ಯಾವುದೇ ಹಾನಿಯಾಗಿಲ್ಲ. ವೈದ್ಯರು ತಲೆಚಿಪ್ಪನ್ನು ಕೊರೆದು ಚುಚ್ಚಿದ್ದ ಕೀಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಎಕ್ಸ್‌ರೇನಲ್ಲಿ ಕಂಡುಬಂದ ದೃಶ್ಯ
ಆರಂಭದಲ್ಲಿ ಪ್ರತೀಕ್‌ರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದರಾದರು, ಪ್ರಕರಣ ಗಂಭೀರವಾಗಿದ್ದರಿಂದ ಆನಂದ ರಿಷಿ ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದರು. ಪ್ರತೀಕ್‌ ಅವರಿಗೆ ಕ್ರಾನಿಯೋಟೊಮಿ (craniotomy) ಅಥವಾ ಬರ್‌ ಹೋಲ್‌ ಸರ್ಜರಿ ಮೂಲಕ ತಲೆಬುರುಡೆಯನ್ನು ಕೊರೆದು ಚುಚ್ಚಿದ್ದ ಕೀಯನ್ನು ಹೊರಗೆ ತೆಗೆಯಲಾಗಿದೆ.

Comments are closed.