ರಾಷ್ಟ್ರೀಯ

ಸ್ಕೂಟಿಯಲ್ಲಿ ಹೋಗುತ್ತಿದ್ದ ಮಾಡೆಲ್ ಳ ಸ್ಕರ್ಟ್ ಎಳೆದ ಕಾಮುಕರು!

Pinterest LinkedIn Tumblr


ಇಂದೋರ್: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗಲೇ ಇಬ್ಬರು ಕಾಮುಕರು ಸಾರ್ವಜನಿಕವಾಗಿ ಮಧ್ಯಪ್ರದೇಶ ಮೂಲದ ಮಾಡೆಲ್ ವೊಬ್ಬಳ ಸ್ಕರ್ಟ್ ಎಳೆಯಲು ಪ್ರಯತ್ನಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಆಕೆ ಕೆಳಗೆ ಬಿದ್ದ ಘಟನೆ ನಡೆದಿದೆ.

ಈ ಘಟನೆ ನಡೆದಿದ್ದು ಭಾನುವಾರ ಇಂಧೋರ್ ನ ಜನನಿಬಿಢ ರಸ್ತೆಯಲ್ಲಿ ಮಾಡೆಲ್ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ದುಷ್ಕರ್ಮಿಗಳು ಸಮೀಪಕ್ಕೆ ಬಂದು ಆಕೆಯ ಸ್ಕರ್ಟ್ ಅನ್ನು ಎಳೆಯಲು ಪ್ರಯತ್ನಿಸಿದ್ದರು. ಆಗ ಆಕೆ ಸ್ಕೂಟಿಯನ್ನು ನಿಲ್ಲಿಸಲು ಪ್ರಯತ್ನಿಸಿದ್ದು, ಅದು ಸಾಧ್ಯವಾಗದೆ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಹೋಗಿ ಬಿದ್ದಿರುವುದಾಗಿ ವರದಿ ತಿಳಿಸಿದೆ.

ಕೆಳಗೆ ಬಿದ್ದಾಕೆಯ ನೆರವಿಗೆ ಯಾರೂ ಬರಲಿಲ್ಲ ಎಂದು ಆಕೆ ದೂರಿದ್ದು, ಅದರಲ್ಲಿ ಒಬ್ಬರು ಬಂದು ನಿನ್ನ ಸ್ಕರ್ಟ್ ನಿಂದಾಗಿಯೇ ಹೀಗಾಗಿದ್ದು ಎಂದು ದೂಷಿಸಿರುವುದಾಗಿ ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಇಬ್ಬರು ಏಕಾಏಕಿ ಬೈಕ್ ನಲ್ಲಿ ಸಮೀಪಕ್ಕೆ ಬಂದು ಸ್ಕರ್ಟ್ ಎಳೆಯಲು ಪ್ರಯತ್ನಿಸಿ, ನೋಡುವಾ ಸ್ಕರ್ಟ್ ಒಳಗೆ ಏನಿದೆ ಎಂದು ಪ್ರಶ್ನಿಸಿರುವುದಾಗಿ ಆಕೆ ತಿಳಿಸಿದ್ದಾರೆ. ಇದೆಲ್ಲವೂ ಕೆಲವು ನಿಮಿಷಗಳಲ್ಲಿ ನಡೆದು ಹೋಗಿದ್ದು, ನಾನು ಕೆಳಗೆ ಬಿದ್ದಿದ್ದೆ. ಆದರೆ ಯಾರೂ ತಡೆಯಲು ಬಂದಿಲ್ಲ ಎಂದು ಆರೋಪಿಸಿದ್ದಾರೆ. ಈ ಘಟನೆಯಿಂದ ನನಗೆ ಮಾತುಗಳೇ ಇಲ್ಲದಂತಾಗಿತ್ತು ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ತಾನು ಮತ್ತೆ ಆ ಸ್ಥಳಕ್ಕೆ ಬಂದು ಪ್ರದೇಶದಲ್ಲಿ ಸಿಸಿಟಿವಿ ಇದೆಯಾ ಎಂದು ಪರೀಕ್ಷಿಸಿದ್ದು, ಅಲ್ಲಿ ಯಾವುದೇ ಸಿಸಿಟಿವಿ ಇಲ್ಲ, ಹೀಗಾಗಿ ಆ ಕಾಮುಕರ ಗುರುತು ಹಿಡಿಯೋದು ಕಷ್ಟ. ಅವರು ಮುಕ್ತವಾಗಿ ಓಡಾಡಿಕೊಂಡಿರುತ್ತಾರೆ. ನಾನು ದೂರು ಕೊಡುತ್ತೇನೆ. ಆದರೆ ಆ ಕಾಮುಕರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ

-ಉದಯವಾಣಿ

Comments are closed.