ಕರ್ನಾಟಕ

5 ರೂ. ನಾಣ್ಯಗಳ ಗಂಟು ತಂದು ಠೇವಣಿ ಸಲ್ಲಿಸಿದ ಐದು ರೂ. ಡಾಕ್ಟರ್

Pinterest LinkedIn Tumblr


ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಐದು ರೂಪಾಯಿ ವೈದ್ಯ ಎಂದೇ ಖ್ಯಾತರಾಗಿರುವ ಡಾ.ಶಂಕರೇಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಅಚ್ಚರಿಯ ವಿಷಯ ಎಂದರೆ ಐದು ರೂ ವೈದ್ಯ ಎಂದೇ ಹೆಸರುವಾಸಿಯಾಗಿ, ಚಿಕಿತ್ಸೆಗಾಗಿ ಪಡೆದಿದ್ದ ಐದು ರೂಪಾಯಿ ನಾಣ್ಯಗಳನ್ನೇ ನಾಮಪತ್ರದ ಜತೆ ಠೇವಣಿಯಾಗಿ ಸಲ್ಲಿಸಿದ್ದಾರೆ.

10 ಸಾವಿರ ರೂಪಾಯಿಯಷ್ಟು ನಾಣ್ಯಗಳನ್ನು ತಂದು ಶಂಕರೇಗೌಡರು ನಾಮಪತ್ರದ ಜತೆ ಸಲ್ಲಿಸಿದರು.

10 ಸಾವಿರ ರೂಪಾಯಿ ಮೌಲ್ಯದ ಐದು ರೂ. ನಾಣ್ಯಗಳನ್ನು ಸ್ವೀಕರಿಸಿದ ಚುನಾವಣಾಧಿಕಾರಿ ನಂತರ ಇದನ್ನು ನೋಟುಗಳಾಗಿ ಪರಿವರ್ತಿಸಿಕೊಂಡರು.

ಜೆಡಿಎಸ್‌ನಿಂದ ಶಂಕರೇಗೌಡರು ನಾಮಪತ್ರ ಸಲ್ಲಿಸುತ್ತಾರೆ ಎಂಬ ವದಂತಿ ಇತ್ತು.

ಆದರೆ ಜೆಡಿಎಸ್‌ನಿಂದ ಟಿಕೆಟ್‌ ಸಿಗದ ಕಾರಣ ಶಂಕರೇಗೌಡರು ಬಿಜೆಪಿಯ ಕಡೆ ಮುಖ ಮಾಡಿದ್ದಾರೆ ಎಂಬು ಗುಸುಗುಸು ಕೂಡ ಕೇಳಿಬಂದಿತ್ತು.

ಆದರೆ ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಶಂಕರೇಗೌಡರು ನಾಮಪತ್ರ ಸಲ್ಲಿಸಿದರು.

Comments are closed.