ರಾಷ್ಟ್ರೀಯ

ಹ್ಯಾಂಡ್‌ ಬ್ರೇಕ್‌ ಸಡಿಲಿಸಿದ ಮಗು: ಅಪಘಾತಕ್ಕೆ 7 ಬಲಿ

Pinterest LinkedIn Tumblr


ಗಾಜಿಯಾಬಾದ್‌: ಮದುವೆ ದಿಬ್ಬಣದೊಂದಿಗೆ ಪ್ರಯಾಣಿಸುತ್ತಿದ್ದ ಮಗುವೊಂದು ಟಾಟಾ ಸುಮೊದ ಹ್ಯಾಂಡ್‌ಬ್ರೇಕ್‌ ಸಡಿಲಿಸಿದ ಪರಿಣಾಮವಾಗಿ ಸುಮೊ ರಸ್ತೆ ಬದಿಯ ಕಮರಿಗೆ ಉರುಳಿ 7 ಜನ ಮೃತಪಟ್ಟಿದ್ದಾರೆ.

ಹೊಸದಿಲ್ಲಿ ಸಮೀಪ ಈ ದುರಂತ ಸಂಭವಿಸಿದೆ. 12 ಜನರಿದ್ದ ಟಾಟಾ ಸುಮೊ ಉತ್ತರ ಪ್ರದೇಶದ ಬೆಹ್ರಾಂಪುರದಿಂದ ಖೋಡಾಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಚಾಲಕ ಸುಮೊ ನಿಲ್ಲಿಸಿ ಕೆಳಗಿಳಿದಿದ್ದಾರೆ. ಆ ಸಂದರ್ಭದಲ್ಲಿ ಮಗು ಹ್ಯಾಂಡ್‌ಬ್ರೇಕ್‌ ಹಿಡಿದು ಎಳೆದಿದೆ.

ಮಗು ಎಳೆಯುವಾಗ ಹ್ಯಾಂಡ್ ಬ್ರೇಕ್‌ ಸಡಿಲಗೊಂಡ ಪರಿಣಾಮ ಸುಮೊ ರಸ್ತೆಬದಿಯ ಕಣಿವೆಗೆ ಉರುಳಿದೆ. 4 ಮಹಿಳೆಯರು, ಒಂದು ಮಗು ಸೇರಿದಂತೆ 7 ಮಂದಿ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.