ರಾಷ್ಟ್ರೀಯ

75ನೇ ವಯಸ್ಸಿನಲ್ಲೂ ಉಚಿತ ಸೇವೆ ನೀಡುತ್ತಿರುವ ಪದ್ಮಶ್ರಿ ವಿಜೇತ ವೈದ್ಯ!

Pinterest LinkedIn Tumblr


ವಾರಾಣಸಿ: 2016ರಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ, ಸರ್‌ ಸುಂದರ್‌ಲಾಲ್‌ ಆಸ್ಪತ್ರೆಯ ಹೃದಯ ತಜ್ಞ ಟಿ.ಕೆ ಲಹಿರಿ(75) ಬಡವರ ಪಾಲಿಗೆ ಸಾಕ್ಷಾತ್‌ ದೇವರಾಗಿದ್ದಾರೆ. ದೇಶದ ವಿವಿಧ ಕಡೆಯಿಂದ ಇವರ ಬಳಿ ಚಿಕಿತ್ಸೆಗೆ ಬರುವ ರೋಗಿಗಳಿಂದ ಬಿಡಿಗಾಸು ತೆಗೆದುಕೊಳ್ಳದೆ ಪರೀಕ್ಷೆ ಮಾಡುತ್ತಾರೆ.

ಕಡುಬಡ ರೋಗಿಗಳು ಔಷಧಿ ತೆಗೆದುಕೊಳ್ಳಲು ಹಣವಿಲ್ಲದೆ ಪರದಾಡುವುದನ್ನು ನೋಡಿದರೆ ತಮ್ಮ ಜೇಬಿನಿಂದಲೇ ಹಣ ಕೊಟ್ಟು ಸಹಾಯ ಮಾಡುವಂಥ ಉದಾರ ಮನಸ್ಸು ಇವರದ್ದು.

2003ರಲ್ಲಿ ನಿವೃತ್ತಿಯಾದ ಬಳಿಕ ಬಿಹೆಚ್‌ಯು ಆಸ್ಪತ್ರೆಗೆ ಪ್ರತಿದಿನ ಭೇಟಿ ನೀಡಿ ಯಾವುದೇ ಫೀಸ್‌ ಇಲ್ಲದೆ ರೋಗಿಗಳನ್ನು ಪರೀಕ್ಷಿಸುತ್ತಾರೆ. ಬನಾರಸ್ ಹಿಂದೂ ಯೂನಿವರ್ಸಿಟಿ ಅವರನ್ನು ವಿಶ್ರಾಂತ ಪ್ರೊಫೆಸರ್ ಎಂಬ ಗೌರವ ನೀಡಿ ಸೇವೆ ಮುಂದುವರಿಸಿದೆ.

‘ತುಂಬಾ ವರ್ಷಗಳಿಂದ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಇವರನ್ನು ನೋಡಿ ಜನರು ಸೇವಾ ಮನೋಭಾವವನ್ನು ಕಲಿಯಬೇಕಾಗಿದೆ ‘ ಎಂದು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರತಜ್ಞ ಡಾ. ವಿಜಯ್‌ ಮಿಶ್ರ ಪೊ. ಲಹಿರಿ ಸೇವೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

Comments are closed.