ರಾಷ್ಟ್ರೀಯ

ಮದುವೆಗೆ ಪೀಡನೆ: ಬೇಸತ್ತ 18ರ ಹರೆಯದ ತರುಣಿ ಆತ್ಮಹತ್ಯೆ

Pinterest LinkedIn Tumblr


ಔರಂಗಾಬಾದ್‌ : ತನ್ನನ್ನು ಮದುವೆಯಾಗುವಂತೆ ಕಳೆದ ಕೆಲವು ತಿಂಗಳಿಂದ ವ್ಯಕ್ತಿಯೋರ್ವ ಪೀಡಿಸುತ್ತಿದ್ದ ಕಾರಣಕ್ಕೆ ಬೇಸತ್ತ 18ರ ಹರೆಯದ ತರುಣಿಯೊಬ್ಬಳು ಮನೆಯಲ್ಲಿ ಸೀಲಿಂಗ್‌ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಔರಂಗಾಬಾದ್‌ ಜಿಲ್ಲೆಯ ಕನ್ನಡ್‌ ತೆಹಶೀಲ್‌ನ ವಾದ್‌ನೇರ್‌ ಗ್ರಾಮದಲ್ಲಿ ನಡೆದಿದೆ.

ಪೊಲೀಸರು ಈ ಸಂಬಂಧ ಆರೋಪಿ ರಮಾನಂದ ವಿಜಯ್‌ ರಾಠೊಡ್‌ ಮತ್ತು ಆತನ ತಾಯಿಯ ವಿರುದ್ಧ ಆತ್ಮಹತ್ಯೆಗೆ ಚಿತಾವಣೆ ನಡೆಸಿದ ಕಾರಣಕ್ಕೆ ಕೇಸು ದಾಖಲಿಸಿಕೊಂಡಿದ್ದಾರೆ ಎಂದು ಇನ್ಸ್‌ಪೆಕ್ಟರ್‌ ಮಾರುತಿ ಪಂಡಿತ್‌ ತಿಳಿಸಿದ್ದಾರೆ.

ರಾಠೊಡ್‌ ನ ಪೀಡನೆಯಿಂದ ಬೇಸತ್ತಿದ್ದ ಮಹಿಳೆಗೆ ಆ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ಆದರೆ ಆಕೆ ಗ್ರಾಮದ ಮುಖ್ಯಸ್ಥರ ಗಮನಕ್ಕೂ ವಿಷಯವನ್ನು ತಾರದೆ ಆತ್ಮಹತ್ಯೆಗೆ ಶರಣಾದಳು ಎಂಧು ಪಂಡಿತ್‌ ತಿಳಿಸಿದ್ದಾರೆ.

-ಉದಯವಾಣಿ

Comments are closed.