ರಾಷ್ಟ್ರೀಯ

ಮೆಕ್ಕಾ ಮಸೀದಿ ಸ್ಫೋಟ:NIAಯದ್ದು ಕುರುಡು ಮತ್ತು ಕಿವುಡು ತನಿಖೆ

Pinterest LinkedIn Tumblr


ಹೈದರಾಬಾದ್‌: ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾದಳದ ವಿರುದ್ಧ ಎಂಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್‌ ಓವೈಸಿ ಕಿಡಿ ಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ ‘ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬದ ಯಾವುದೇ ಸದಸ್ಯರು ಮೇಲ್ಮನವಿ ಸಲ್ಲಿಸಲು ಇಚ್ಛಿಸಿದಲ್ಲಿ ನಾನು ಎಲ್ಲಾ ರೀತಿಯ ನೆರವು ನೀಡುತ್ತೇನೆ’ ಎಂದಿದ್ದಾರೆ.

‘ಪಂಜರದ ಗಿಣಿಯಾಗಿರುವ ಎನ್‌ಐಎ ಸಂಪೂರ್ಣ ಕುರುಡು ಮತ್ತು ಕಿವುಡು ತನಿಖೆ ನಡೆಸಿ ತೀರ್ಪು ಹೊರ ಹಾಕಿದೆ. ಇದು ಸಣ್ಣ ಪ್ರಕರಣವಲ್ಲ’ ಎಂದಿದ್ದಾರೆ.

2007ರ ಮೇ 18 ರಂದು ನಡೆದ ಸ್ಫೋಟದಲ್ಲಿ 9 ಮಂದಿ ಸಾವನ್ನಪ್ಪಿ 58 ಮಂದಿ ಗಾಯಗೊಂಡಿದ್ದರು. ಪ್ರಕರಣದಲ್ಲಿ ಬಂಧಿಯಾಗಿದ್ದ ಸ್ವಾಮೀ ಅಸೀಮಾನಂದ ಸೇರಿ ಎಲ್ಲಾ 10 ಆರೋಪಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

-ಉದಯವಾಣಿ

Comments are closed.