ರಾಷ್ಟ್ರೀಯ

ಜಿಮೇಲ್‌ನಲ್ಲಿ ಕಳುಹಿಸಿದ ಸಂದೇಶ ವಾಪಸ್‌

Pinterest LinkedIn Tumblr


ಜಿಮೇಲ್‌ ಬಳಸುವವರಿಗೆ ಈ ವಿಷಯ ಗೊತ್ತಿರಲಿ. ಯಾವುದೋ ಒಂದು ಮೇಲ್‌ ಕಳುಹಿಸಿರುತ್ತೀರಿ. ಕಳುಹಿಸಿದ ತಕ್ಷ ಣ, ಅದು ಅವರಿಗೆ ಕಳುಹಿಸಬಾರದಾಗಿತ್ತು ಎಂದೋ, ಅದರಲ್ಲಿ ಅಕ್ಷ ರ ತಪ್ಪು ಸರಿಪಡಿಸಬೇಕು ಎಂದೋ, ವಾಕ್ಯ ಸೇರಿಸಬೇಕು ಅಂತಲೋ ಅಥವಾ ಬರೆದುದು ತಪ್ಪಾಯಿತು ಅಂತಲೋ ಅರಿವಿಗೆ ಬಂದರೆ, ಕಳುಹಿಸಿದ ಸಂದೇಶವನ್ನು, ಅವರಿಗೆ ತಲುಪುವ ಮುನ್ನವೇ ವಾಪಸ್‌ ಕರೆಸಿಕೊಳ್ಳುವ ಆಯ್ಕೆಯೊಂದಿದೆ. ಅದುವೇ ಅನ್‌ಡೂ (undo). ಮೇಲ್‌ ಕಳುಹಿಸಿದಾಕ್ಷ ಣ, ಮೇಲ್ಭಾಗದಲ್ಲಿ undo ಅಂತ ಬಟನ್‌ ಕಾಣಿಸುತ್ತದೆ. 30 ಸೆಕೆಂಡ್‌ವರೆಗೆ ಇದು ಕಾಣಿಸುವಂತೆ ಮಾಡಬಹುದು. ಇದಕ್ಕಾಗಿ, ಜಿಮೇಲ್‌ ಸೆಟ್ಟಿಂಗ್ಸ್‌ನಲ್ಲಿ (ಗಿಯರ್‌ ಐಕಾನ್‌) ‘ಜನರಲ್‌’ ವಿಭಾಗದಲ್ಲಿ, undo send ಅಂತ ಇರುವಲ್ಲಿ 30 ಸೆಕೆಂಡ್‌ ಆಯ್ಕೆ ಮಾಡಿಕೊಂಡು, ನಂತರ ಕೆಳಗೆ ‘ಸೇವ್‌ ಚೇಂಜಸ್‌’ ಕ್ಲಿಕ್‌ ಮಾಡಿದರಾಯಿತು.

Comments are closed.