ರಾಷ್ಟ್ರೀಯ

ಅಸೀಮಾನಂದ ಖುಲಾಸೆ: ರಾಜೀನಾಮೆ ನೀಡಿದ ನ್ಯಾಯಾಧೀಶರ ನಡೆ ಏನು

Pinterest LinkedIn Tumblr


ಹೈದರಾಬಾದ್‌: ಹೈದರಾಬಾದ್‌ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಹಾಗೂ ಇತರ ನಾಲ್ವರು ಆರೋಪಿಗಳನ್ನು ದೋಷಮುಕ್ತಗೊಳಿಸಿದ ಬೆನ್ನಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ವಿಶೇಷ ನ್ಯಾಯಾಧೀಶ ಕೆ. ರವೀಂದ್ರ ರೆಡ್ಡಿ ಅವರ ನಿಗೂಢ ನಡೆಯ ಬಗ್ಗೆ ಇಲ್ಲಿಯ ತನಕ ಮಾಹಿತಿ ಸಿಕ್ಕಿಲ್ಲ.

ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆಯೂ ಅಕೃತ ಮಾಹಿತಿ ಇಲ್ಲ. ಆದರೆ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕವಾಗಿ ಚರ್ಚಿಸದಂತೆ ಸೂಚನೆಗಳನ್ನು ರವಾನಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಹೈದರಾಬಾದ್‌ ಹೈಕೋರ್ಟ್‌ನ ಉನ್ನತಾಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ತೀರ್ಪಿಗೂ ರೆಡ್ಡಿ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಂಗದ ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.