ರಾಷ್ಟ್ರೀಯ

ಅಕ್ಷಯ ತೃತೀಯದಂದು 11 ವರ್ಷಗಳ ಬಳಿಕ ಸಿಕ್ಕಿದ ಮದುವೆ ಮುಹೂರ್ತ: ಪೂಜಾರಿಗಳು ಫುಲ್‌ ಬ್ಯುಸಿ

Pinterest LinkedIn Tumblr


ಫೈಜಾಬಾದ್: ಅಕ್ಷಯ ತೃತೀಯ ಚಿನ್ನ ಖರೀದಿಗೆ ಮಾತ್ರವಲ್ಲ, ಮದುವೆ ಮುಹೂರ್ತಕ್ಕೂ ಅತ್ಯಂತ ಶುಭಗಳಿಗೆಯಾಗಿರುವುದರಿಂದ ಮದುವೆ ಮಾಡಿಸುವಲ್ಲಿ ಪೂಜಾರಿಗಳು ಬ್ಯುಸಿಯಾಗಿದ್ದಾರೆ.

ಒಬ್ಬೊಬ್ಬರು 4-5 ಮದುವೆ ಕಾರ್ಯಕ್ರಮಗಳನ್ನು ನಡೆಸಬೇಕಾಗಿರುವುದರಿಂದ ತಾವೊಂದು ಮದುವೆಗೆ ಹೋಗಿ ಉಳಿದ ಮದುವೆಗಳಿಗೆ ಶಾಸ್ತ್ರ ಮಾಡಲು ತಮ್ಮ ಶಿಷ್ಯರನ್ನು ಕಳುಹಿಸಿ ಕೊಡುತ್ತಿದ್ದಾರೆ.

’11 ವರ್ಷಗಳ ಬಳಿಕ ಇಂಥದ್ದೊಂದು ಶುಭ ಮುಹೂರ್ತ ಕೂಡಿ ಬಂದಿರುವುದರಿಂದ ಹೆಚ್ಚಿನವರು ಈ ಶುಭ ಮುಹೂರ್ತದಲ್ಲಿ ಮದುವೆಯಾಗಲು ಇಚ್ಚಿಸುತ್ತಿದ್ದಾರೆ.

‘ಈ ವರ್ಷ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಕೇವಲ 35 ಶುಭ ಮುಹೂರ್ತಗಳಿವೆ. ಅಕ್ಷಯ ತೃತೀಯ ಬುಧವಾರ ಬೆಳಗ್ಗೆ 4.47 ಗಂಟೆಯಿಂದ ಗುರುವಾರ ಬೆಳಗ್ಗೆ 3.03 ಗಂಟೆವರೆಗೆ ಇರುತ್ತದೆ. ಗುರುವಾರ ಬೆಳಗ್ಗೆ 2.02-4 ಗಂಟೆಯ ಸಮಯ ಅತ್ಯಂತ ಅದೃಷ್ಟದ ಸಮಯವಾಗಿರುವುದರಿಂದ ಹೆಚ್ಚಿನ ಮದುವೆಗಳು ಈ ಮುಹೂರ್ತಕ್ಕೆ ನಿಗದಿಯಾಗಿದೆ. ಆದ್ದರಿಂದ ಪ್ರಮುಖ ಪೂಜಾರಿಗಳು ತಾವು ಒಪ್ಪಿಕೊಂಡಿರುವ ಮದುವೆ ಕಾರ್ಯಕ್ರಮಗಳಲ್ಲಿ ವಿಐಪಿ ಮದುವೆಗೆ ತಾವು ಹೋಗಿ ಉಳಿದ ಮದುವೆಗೆ ತಮ್ಮ ಶಿಷ್ಯರನ್ನು ಕಳುಹಿಸುತ್ತಿದ್ದಾರೆ’ ಅಂತಾರೆ ಪೂಜಾರಿ ಮಹೇಂದ್ರ ಪಠಾಕ್‌.

ಅಕ್ಷಯ ತೃತೀಯದಂದು ಚಿನ್ನದ ಬೆಲೆ ಕೂಡ ತುಟ್ಟಿಯಾಗಿದೆ. ಈ ವಿಶೇಷ ದಿನದಂದು 50 ಕೆಜಿ ಚಿನ್ನ, 150 ಕೆಜಿ ಬೆಳ್ಳಿ ಮಾರಾಟವಾಗುವ ಸಾಧ್ಯತೆ ಇದೆ, ಇದರಿಂದ 13 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ಹಾಕಲಾಗಿದೆ ಎಂದು ಅಂದಾಜು ಮಾಡಲಾಗಿದೆ.

ಎಲ್ಲಾ ಕಡೆ ಮದುವೆ ಇರುವುದರಿಂದ ಮದುವೆ ಬ್ಯಾಂಡ್‌ ಕಂಪನಿಯವರಿಗೂ ಈ ಬಾರಿಯ ಅಕ್ಷಯ ತೃತೀಯ ಭರ್ಜರಿ ಲಾಭ ತಂದಿದೆ.

Comments are closed.