ರಾಷ್ಟ್ರೀಯ

ಪಶ್ಚಿಮ ಬಂಗಾಲದ ಹಳ್ಳಿಯಲ್ಲಿ 2ನೇ ಮಹಾಯುದ್ಧದ ಬಾಂಬ್‌ ಪತ್ತೆ

Pinterest LinkedIn Tumblr


ಹಂಸಖಲಿ, ಪಶ್ಚಿಮ ಬಂಗಾಲ : ನಾದಿಯಾ ಜಿಲ್ಲೆಯ ಹಂಸಖಲಿ ಪೊಲೀಸ್‌ ಠಾಣೆ ವ್ಯಾಪ್ತಿಯ ಛೋಟೋ ಛುಪ್ರಿಯಾ ಗ್ರಾಮದಲ್ಲಿ ಕೊಳವೊಂದನ್ನು ತೋಡುವಾಗ ಸಿಲಿಂಡರ್‌ ಆಕೃತಿ ಎರಡು ದೊಡ್ಡ ವಸ್ತುಗಳು ಸಿಕ್ಕಿದ್ದು ಇವು ಎರಡನೇ ಮಹಾಯುದ್ಧದ ಬಾಂಬ್‌ ಇದ್ದಿರಬೇಕೆಂದು ಶಂಕಿಸಲಾಗಿದೆ.

50 ಇಂಚು ಉದ್ದ ಮತ್ತು 38 ಇಂಚು ಸುತ್ತಳತೆಯ ಈ ಶಂಕಿತ ಬಾಂಬ್‌ಗಳನ್ನು ಪರಿಶೀಲಿಸಲು ಕೋಲ್ಕತಾದಿಂದ ಸೇನೆಯನ್ನು ಕರೆಸಿಕೊಳ್ಳಲಾಗಿದ್ದು ಅವರು ಬಂದು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯಾಡಳಿತೆಯ ಅನುಮತಿ ದೊರಕಿದಾಕ್ಷಣ ಇವುಗಳನ್ನು ಒಯ್ಯುವುದಾಗಿ ಅವರು ಹೇಳಿದ್ದಾರೆ.

ನಾದಿಯಾ ಜಿಲ್ಲಾಡಳಿತೆ ಹೇಳಿರುವ ಪ್ರಕಾರ 1940ರ ಆದಿಯಲ್ಲಿ ಈಗ ಕಲ್ಯಾಣಿ ನಗರವೆಂದು ಕರೆಯಲ್ಪಡುತ್ತಿರುವ ಪ್ರದೇಶವು ಆಗ ರೂಸ್‌ವೆಲ್ಟ್ ಟೌನ್‌ ಆಗಿತ್ತು ಮತ್ತು ಇಲ್ಲಿ ಅಮೆರಿಕ ವಾಯುನೆಲೆಯೂ ಇತ್ತು ಎನ್ನಲಾಗಿದೆ. ಈಗ ಸಿಕ್ಕಿರುವ ಎರಡು ಬಾಂಬ್‌ಗಳು ವಾಯುನೆಲೆಗೆ ಸಂಬಂಧಿಸಿದ್ದಿರಬಹುದು ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

-ಉದಯವಾಣಿ

Comments are closed.