ರಾಷ್ಟ್ರೀಯ

ವಿಎಚ್‌ಪಿ ತೊರೆದ ಬಳಿಕ ಮೋದಿ ವಿರುದ್ಧ ತೊಗಾಡಿಯಾ ವಾಗ್ದಾಳಿ

Pinterest LinkedIn Tumblr


ಅಹಮದಾಬಾದ್‌: ಕಳೆದ ನಾಲ್ಕು ವರ್ಷಗಳಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ತಮಗೆ ಭಿನ್ನಾಭಿಪ್ರಾಯ ಇದ್ದುದು ನಿಜ ಎಂದು ವಿಶ್ವ ಹಿಂದೂ ಪರಿಷತ್‌ನ ಮಾಜಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಹೇಳಿದ್ದಾರೆ.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ”ಗೋಧ್ರೋತ್ತರ ಗಲಭೆಯಲ್ಲಿ ಹಿಂದೂಗಳ ಹತ್ಯೆಯಾದಾಗಲೇ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತು. ಆದರೂ 2014ರ ಚುನಾವಣೆಯಲ್ಲಿ ಮೋದಿ ಅವರನ್ನು ವಿಎಚ್‌ಪಿ ಬೆಂಬಲಿಸಿತು. ಆದರೆ ಮೋದಿ ಅವರು ಗೋರಕ್ಷಕರನ್ನು ಗೂಂಡಾಗಳೆಂದು ಕರೆದರು. ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸಿದವರು ಮತ್ತು ಪಾಕಿಸ್ತಾನ ಬೆಂಬಲಿಗರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದರು. ಗೋಧ್ರಾ ಗಲಭೆಯಲ್ಲಿ ಬಂಧಿಸಲಾಗಿರುವ ಸಾವಿರಾರು ಹಿಂದೂಗಳು ಮಾತ್ರ ಈಗಲೂ ಜೈಲಿನಲ್ಲಿದ್ದಾರೆ,” ಎಂದು ಭಿನ್ನಾಭಿಪ್ರಾಯದ ಕಾರಣವನ್ನು ಬಿಚ್ಚಿಟ್ಟರು.

ಹಿಂದೂಗಳ ದೀರ್ಘಕಾಲದ ಕನಸು ಸಾಕಾರಗೊಳಿಸುವುದಕ್ಕಾಗಿ ಮಂಗಳವಾರದಿಂದ ಅಹಮದಾಬಾದ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿಯೂ ತೊಗಾಡಿಯಾ ತಿಳಿಸಿದರು.

Comments are closed.