ರಾಷ್ಟ್ರೀಯ

ಬಿಂದಿ ಧರಿಸಿದ ವಿಧವೆ ಪತ್ನಿಗೆ ಪಿಂಚಣಿ ನಿರಾಕರಿಸಿದ ಅಧಿಕಾರಿ

Pinterest LinkedIn Tumblr


ಚೆನ್ನೈ: ಬಿಂದಿ ಹಾಕಿದ್ದಾರೆ ಎಂಬ ಕಾರಣಕ್ಕಾಗಿ ದೇವಿ (77) ಎಂಬ ವೃದ್ಧೆಗೆ ಗಂಡನಿಗೆ ಬರುತ್ತಿದ್ದ ಪಿಂಚಣಿಯನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.

ದೇವಿ ಅವರ ಗಂಡ ರಮಶ್‌ (82) ಮಾರ್ಚ್‌ನಲ್ಲಿ ಮರಣ ಹೊಂದಿದ್ದರು. ರಮೇಶ್‌ ಅವರು 1993ರವರೆಗೆ ರಾಜಾಜಿ ಸಲೈ ಟ್ರಸ್ಟ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು. ಅದಾದ ಬಳಿಕ ಅವರಿಗೆ ಪಿಂಚಣಿ ಬರುತ್ತಾ ಇತ್ತು. ಗಂಡನ ಮರಣದ ಬಳಿಕ ಹೆಂಡತಿ ದೇವಿ ಅವರಿಗೆ ಶೇ. 70ರಷ್ಟು ಪಿಂಚಣಿ ಹೊಂದುವ ಹಕ್ಕು ಇತ್ತು.

ಮಗ ಹಾಗೂ ಸೊಸೆ ಜತೆ ಹೋಗಿ ಪಿಂಚಣಿಗೆ ಫಾರಂ ತುಂಬಲು ಬಂದಾಗ ಫೋಟೋವೊಂದನ್ನೂ ನೀಡಿದರು. ಫೋಟೋದಲ್ಲಿ ಬಿಂದಿ ಹಾಕಿದ್ದರು. ಇದನ್ನು ನೋಡಿದ ಅಧಿಕಾರಿ ‘ವಿಧವೆಯರು ಬಿಂದಿ, ಹೂ ಧರಿಸಬಾರದು, ಬಿಂದಿಯಿಲ್ಲದ ಮತ್ತೊಂದು ಫೋಟೋ ತಂದು ಕೊಡಿ’ ಎಂದು ಹೇಳಿದ್ದಾನೆ.

ಈತನ ವರ್ತನೆಗೆ ಮೇಲಾಧಿಕಾರಿಗೆ ತಿಳಿಸಿದಾಗ ಅವರು ಕೂಡ ಅಡ್ಜೆಸ್ಟ್ ಮಾಡಿಕೊಂಡು ಹೋಗಿ ಎಂಬ ಮಾತನ್ನು ಹೇಳಿದ ಎನ್ನಲಾಗಿದೆ. ಈಗ ಈ ವೃದ್ಧೆಯೂ ಪಿಂಚಣಿಗೆ ಅಲೆದಾಡುತ್ತಿದ್ದಾರೆ.

Comments are closed.