ರಾಷ್ಟ್ರೀಯ

ಮದ್ಯಪಾನ ಮಾಡಿದ ವರನನ್ನು ಬೇಡವೆಂದ ವಧು

Pinterest LinkedIn Tumblr


ಕಮಲಪುರ(ಉ.ಪ್ರ): ಕುಡಿತ ಮನೆ ಹಾಳು ಮಾಡಿತು ಎಂಬ ಮಾತಿದೆ, ಇಲ್ಲೊಬ್ಬನ ಕುಡಿತದ ಅಭ್ಯಾಸ ಅವನ ಮದುವೆಯನ್ನೇ ಮುರಿದು ಹಾಕಿದೆ.

ಪತರಾ ಕಾಲಾ ಹಳ್ಳಿಯ ಸುರೇಶ್‌ ಪ್ರಕಾಶ್‌ ಸಿಂಗ್ ತಮ್ಮ ಮಗಳು ಚಾಂದಿನಿಗೆ ಮದುವೆ ಮುಹೂರ್ತ ನಿಶ್ಚಯ ಮಾಡಿದ್ದರು. ಅದರ ಪ್ರಕಾರ ಶನಿವಾರ ಹುಡುಗ-ಹುಡುಗಿಯ ಸಂಬಂಧಿಕರೆಲ್ಲಾ ಆಗಮಿಸಿದ್ದರು. ಆದರೆ ಮದುವೆಗೆ ಮೊದಲು ಹುಡುಗಿಗೆ ಹುಡುಗ ಮದ್ಯ ಕುಡಿದಿದ್ದಾನೆ ಎಂಬ ವಿಷಯ ಗೊತ್ತಾಗಿ ಮದುವೆಯಾಗಲು ನಿರಾಕರಿಸಿ ಬಿಟ್ಟಳು.

ಹುಡುಗಿ ಮನೆಯವರು ಆಕೆಯ ಮನವೊಲಿಸಲು ನೋಡಿದರೂ ಆಕೆ ಒಪ್ಪಲಿಲ್ಲ. ಕೊನೆಗೆ ಹುಡುಗ-ಹುಡುಗಿಯ ಕುಟುಂಬದವರ ಮಧ್ಯೆ ಮಾತಿನ ಚಕಾಮಕಿ ನಡೆದು, ಜೋರು ಜಗಳ ನಡೆಯಲಾರಂಭಿಸಿದಾಗ ಹುಡುಗಿ ಮನೆಯವರು ಪೊಲೀಸರನ್ನು ಕರೆಸಿದರು.

ನೀಡಿದ್ದ ಉಡುಗೊರೆಗಳನ್ನು ಹಿಂದಿರುಗಿಸಲಾಯಿತು. ಮಧುಚಂದ್ರದ ಕನಸಿನೊಂದಿಗೆ ಬಂದವ ಮದ್ಯಪಾನದಿಂದಾಗಿ ಹುಡುಗಿಯಿಲ್ಲದೆ ಹಿಂತಿರುಗಬೇಕಾಯಿತು.

Comments are closed.