ರಾಷ್ಟ್ರೀಯ

ಹೈಸ್ಕೂಲ್‌ ಓದಿದವರಿಗೂ ಸರಕಾರಿ ಉದ್ಯೋಗ: 672 ಹುದ್ದೆಗಳ ಭರ್ತಿ

Pinterest LinkedIn Tumblr


ಭಾರತ ಸರಕಾರದ ಅಧೀನದಲ್ಲಿರುವ ಕೋಲ್‌ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ಸೌತ್‌ ಈಸ್ಟರ್ನ್‌ ಕೋಲ್‌ ಫೀಲ್ಡ್ಸ್‌ ಲಿಮಿಟೆಡ್‌ನಲ್ಲಿ ಟ್ರೇಡ್‌ ಅಪ್ರೆಂಟಿಸ್‌ಶಿಪ್‌ ಪಡೆಯಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಏ.24ರಿಂದ ಮೇ 7ರ ತನಕ ಅವಕಾಶ ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಛತ್ತೀಸ್‌ಗಢದಲ್ಲಿ ತರಬೇತಿ ಪಡೆಯುವ ಅವಕಾಶ ಸಿಗಲಿದೆ.

ಹುದ್ದೆಗಳ ವಿವರ

ಕಂಪ್ಯೂಟರ್‌ ಆಪರೇಟರ್‌ ಮತ್ತು ಪ್ರೋಗ್ರಾಮಿಂಗ್‌ ಅಸಿಸ್ಟೆಂಟ್‌-180, ಸೆಕ್ರೇಟರಿಯಲ್‌ ಅಸಿಸ್ಟೆಂಟ್‌-20, ಆಟೋ ಎಲೆಕ್ಟ್ರಿಷಿಯನ್‌, ಹಾಸ್ಪಿಟಲ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಅಸಿಸ್ಟೆಂಟ್‌ ಮತ್ತು ಸ್ಟೆನೋಗ್ರಾಫರ್‌ (ಇಂಗ್ಲಿಷ್‌)-ತಲಾ 20, ವೆಲ್ಡರ್‌, ಟರ್ನರ್‌ ಮತ್ತು ಡೀಸೆಲ್‌ ಮೆಕ್ಯಾನಿಕ್‌ -ತಲಾ 40 ಹುದ್ದೆಗಳು, ಫಿಟ್ಟರ್‌-80, ಮಷಿನಿಸ್ಟ್‌-30, ಎಲೆಕ್ಟ್ರಿಷಿಯನ್‌(ಮೈನ್ಸ್‌)-172, ಡ್ರಾಟ್ಸ್‌ಮನ್‌ (ಸಿವಿಲ್‌)-10 ಹುದ್ದೆಗಳು ಸೇರಿ ಒಟ್ಟು 672 ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್‌ ಪಡೆಯುವ ಅವಕಾಶ ಸಿಗಲಿದೆ.

ಅರ್ಹತೆಗಳೇನು?

ಎಂಟನೇ ತರಗತಿ, ಎಸ್‌ಎಸ್‌ಎಲ್‌ಸಿ ತೇರ್ಗಡೆ ಮತ್ತು ಎನ್‌ಸಿವಿಟಿ/ಐಟಿಐ ಕೋರ್ಸ್‌ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಕನಿಷ್ಠ 16 ವರ್ಷ ತುಂಬಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

*ಸಂಸ್ಥೆಯ ವೆಬ್‌ಸೈಟ್‌ಗೆ ಲಾಗಿನ್‌ ಆಗಿ

*’ರಿಜಿಸ್ಪ್ರೇಷನ್‌’ ಕ್ಲಿಕ್‌ ಮಾಡಿ, ಅಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಿ

*ಬಳಿಕ ‘ಆನ್‌ಲೈನ್‌ ಅಪ್ಲಿಕೇಶನ್‌’ ಕ್ಲಿಕ್‌ ಮಾಡಿ, ಅಪ್ಲಿಕೇಶನ್‌ ಭರ್ತಿ ಮಾಡಿ

*ಭರ್ತಿ ಮಾಡಿದ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ‘ಸಬ್‌ಮೀಟ್‌’ ಬಟನ್‌ ಕ್ಲಿಕ್‌ ಮಾಡಿ

*ಆನ್‌ಲೈನ್‌ ಅರ್ಜಿಯ ಪ್ರತಿಯೊಂದನ್ನು ಪ್ರಿಂಟೌಟ್‌ ತೆಗೆದುಕೊಳ್ಳಲು ಮರೆಯಬೇಡಿ.

Comments are closed.