ರಾಷ್ಟ್ರೀಯ

ಇಶ್ರಾತ್‌ ಜಹಾನ್‌ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಪ್ರಾಣೇಶ್‌ ಪಿಳ್ಳೈ ತಂದೆ ರಸ್ತೆ ಅಪಘಾತಕ್ಕೆ ಬಲಿ

Pinterest LinkedIn Tumblr


ಆಲಪುಯ: 2004ರಲ್ಲಿ ಗುಜರಾತಿನಲ್ಲಿ ನಡೆದ ಇಶ್ರಾತ್‌ ಜಹಾನ್‌ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಜಾವೇದ್‌ ಗುಲಾಂ ಶೇಖ್‌ ಅಲಿಯಾಸ್ ಪ್ರಾಣೇಶ್‌ ಕುಮಾರ್ ಪಿಳ್ಳೈ ಅವರ ತಂದೆ ಗೋಪಿನಾಥ ಪಿಳ್ಳೈ (77) ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.

ಪಿಳ್ಳೈ ಅವರನ್ನು ಅವರ ಸಂಬಂಧಿಯೊಬ್ಬರು ಬುಧವಾರ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ವಯಲಾರ್‌ ಜಂಕ್ಷನ್‌ ಬಳಿ ಲಾರಿಯೊಂದು ಡಿಕ್ಕಿ ಹೊಡೆದು ಪಿಳ್ಳೈ ಮೃತ ಪಟ್ಟಿದ್ದಾರೆ.

ಪ್ರಾಣೇಶ್‌ ಪಕ್ಕದ ಮನೆಯ ಶಾಜಿದಾ ಅಲಿಯಾಸ್‌ ಇಶ್ರತ್‌ ಜಹಾನ್‌ಳನ್ನು ಪ್ರೀತಿಸಿ 1995ರಲ್ಲಿ ಪುಣೆಯಲ್ಲಿ ಮದುವೆಯಾಗಿದ್ದ. ಇಶ್ರತ್‌ ಥಾಣೆ ನಿವಾಸಿಯಾಗಿದ್ದು ಪ್ರಣೇಶ್‌ನ ಸುಗಂಧ ದ್ರವ್ಯ ಕಂಪನಿಯಲ್ಲಿ ಸೇಲ್ಸ್‌ಗರ್ಲ್‌ ಆಗಿ ಕೆಲಸ ಮಾಡುತ್ತಿದ್ದಳು. ಆಕೆಯ ಅಣ್ಣ ಪ್ರಾಣೇಶ್‌ ಗೆಳೆಯನಾಗಿದ್ದ ಎಂದು ಮೂಲಗಳು ಹೇಳಿವೆ. ಇವರಿಬ್ಬರ ದೇಹ ಅಹಮದಾಬಾದ್‌ನ ಹೊರವಲಯದಲ್ಲಿ ಪತ್ತೆಯಾಗಿದ್ದು, ಗುಜರಾತ್ ಪೊಲೀಸರ ಗುಂಟೇಟಿನಿಂದ ಮೃತರಾಗಿದ್ದರು.

ಪ್ರಾಣೇಶ್ ಅಲಿಯಾಸ್‌ ಜಾವೇದ್‌, ಇಶ್ರತ್‌ , ಅಮ್ಜಾದ್ ಅಲಿ ಎಂಬ ಪಾಕಿಸ್ತಾನಿ ಮತ್ತು ಜಿಶಾನ್‌ ಜೊಹಾರ್‌ ಘನಿ ಲಷ್ಕರೆ ತಯ್ಬಾ ಸಂಘಟನೆಯ ಸದಸ್ಯರಾಗಿದ್ದು ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ನಡೆಸಿದ್ದರು ಎಂದು ಗುಜರಾತ್‌ ಪೊಲೀಸರು ಹೇಳಿದ್ದರು.

Comments are closed.