ರಾಷ್ಟ್ರೀಯ

ವೈಎಸ್ಆರ್ ಕಾಂಗ್ರೆಸ್ ಐದು ಸಂಸದರ ರಾಜೀನಾಮೆ

Pinterest LinkedIn Tumblr


ದೆಹಲಿ: ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ, ಶುಕ್ರವಾರ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಐದು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದ್ದಾರೆ.

ಸಂಸತ್ ಅಧಿವೇಶನದ ಕೊನೆಯ ದಿನ ಇಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾ ಜನ್ ಅವರನ್ನು ಭೇಟಿ ಮಾಡಿದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸದರು ರಾಜಿನಾಮೆ ನೀಡಿದ್ದಾರೆ. ಸಂಸದರಾದ ವಿ.ವರಪ್ರಸಾದ್ ರಾವ್, ವೈ.ವಿ.ಸುಬ್ಬಾ ರೆಡ್ಡಿ, ಪಿ.ವಿ. ಮಿಧುನ್ ರೆಡ್ಡಿ, ವೈ.ಎಸ್.ಅವಿನಾಶ್ ರೆಡ್ಡಿ ಮತ್ತು ಮೆಕಪತಿ ರಾಜಮೋಹನ್ ರೆಡ್ಡಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ರಾಜೀನಾಮೆ ಪತ್ರವನ್ನು ಸಂಸದರು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ನೀಡಿದ್ದಾರೆ.

ರಾಜಿನಾಮೆ ಪತ್ರದಲ್ಲಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂಸದರು, ಮಲತಾಯಿ ಧೋರಣೆಯಿಂದ ಬೇಸತ್ತು ತಾವು ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ದೆಹಲಿಯಲ್ಲಿ ತಮ್ಮ ಪಕ್ಷದ ಸಂಸದರು ರಾಜೀನಾಮೆ ಸಲ್ಲಿಕೆ ಮಾಡುತ್ತಿದ್ದಂತೆಯೇ, ಇತ್ತ ಪಕ್ಷ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ, ನಾವು ನುಡಿದಂತೆ ನಡೆದಿದ್ದೇವೆ. ಆಂಧ್ರ ಪ್ರದೇಶ ವಿಶೇಷ ಸ್ಥಾನಮಾನಕ್ಕಾಗಿ ನಮ್ಮ ಸಂಸದರು ರಾಜಿನಾಮೆ ನೀಡಿದ್ದಾರೆ. ಟಿಡಿಪಿ ಸಂಸದರೂ ಕೂಡ ಇದೇ ಕೆಲಸ ಮಾಡು ತ್ತಾರೆಯೇ ಎಂದು ಸವಾಲೆಸೆದಿದ್ದಾರೆ.

Comments are closed.