ರಾಷ್ಟ್ರೀಯ

ನೀರವ್‌ ಮೋದಿ ಹಾಂಕಾಂಗ್‌ನಲ್ಲಿ

Pinterest LinkedIn Tumblr


ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಾಲ ವಂಚನೆ ಪ್ರಕರಣದ ಆರೋಪಿ ನೀರವ್‌ ಮೋದಿ ಸದ್ಯ ಹಾಂಕಾಂಗ್‌ನಲ್ಲಿ ತಲೆಮರೆಸಿಕೊಂಡಿದ್ದು, ಆತನ ಹಸ್ತಾಂತರಕ್ಕೆ ಸಹಕರಿಸುವಂತೆ ಅಲ್ಲಿನ ಸರಕಾರಕ್ಕೆ ವಿದೇಶಾಂಗ ಸಚಿವಾಲಯ ಮನವಿ ಸಲ್ಲಿಸಿದೆ.

ರಾಜ್ಯಸಭೆ ಪ್ರಶ್ನೋತ್ತರ ವೇಳೆ, ನೀರವ್‌ ಎಲ್ಲಿದ್ದಾನೆ ಎನ್ನುವ ಬಗ್ಗೆ ಮಾಹಿತಿ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ ವಿದೇಶಾಂಗ ಸಹಾಯಕ ಸಚಿವ ವಿ ಕೆ ಸಿಂಗ್‌, ”ಚೀನಾ ಆಡಳಿತ ವ್ಯಾಪ್ತಿಗೆ ಒಳಪಟ್ಟಿರುವ ಹಾಂಕಾಂಗ್‌ನಲ್ಲಿ ಇರುವ ಆರೋಪಿಯ ಬಂಧನಕ್ಕಾಗಿ ಅಲ್ಲಿನ ಸರಕಾರಕ್ಕೆ ಈಗಾಗಲೇ ಅಧಿಕೃತ ಮನವಿ ಸಲ್ಲಿಸಿದ್ದಾಗಿದೆ,” ಎಂದು ಉತ್ತರಿಸಿದರು.

Comments are closed.