ರಾಷ್ಟ್ರೀಯ

ನಟ ಸಲ್ಮಾನ್‌ ಗೆ ಪಾಕ್‌ ನಟಿ ಮಾವ್ರಾ ಬೆಂಬಲ, ಟ್ವೀಟ್ ಮಹಾಪೂರ!

Pinterest LinkedIn Tumblr


ಹೊಸದಿಲ್ಲಿ: ಇಪ್ಪತ್ತು ವರ್ಷಗಳ ಹಿಂದೆ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ್ದ ಅಪರಾಧಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಜೋಧ್‌ಪುರ ಕಾರಾಗೃಹದಲ್ಲಿ ಕೈದಿ ನಂಬರ್‌ 106 ಆಗಿರುವ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ಪಾಕ್‌ ಪ್ರಖ್ಯಾತ ನಟಿ, ಚೆಲುವೆ, ಮಾವ್ರಾ ಹೊಕಾನೆ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಬೆಂಬಲ ಸೂಚಿಸಿದ್ದಾಳೆ. ಅಂತೆಯೇ ಟ್ವಿಟರ್‌ ಪ್ರತಿಕ್ರಿಯೆಗಳ ಮಹಾಪೂರ ಹರಿದು ಬಂದಿದೆ.

ಟ್ವಿಟರ್‌ನಲ್ಲಿ ಸಲ್ಮಾನ್‌ ಖಾನ್‌ ವ್ಯಕ್ತಿತ್ವವನ್ನು ಹಾಡಿ ಹೊಗಳಿರುವ ಪಾಕ್‌ ನಟಿ ಮಾವ್ರಾ, “ಸಲ್ಮಾನ್‌ ಒಬ್ಬ ಒಳ್ಳೆಯ ಮನುಷ್ಯ’ ಎಂದಿದ್ದಾಳೆ.

ಆಕೆ ಸಲ್ಮಾನ್‌ಗೆ ಬೆಂಬಲ ಸೂಚಿಸುವ ಬರಹ ಈ ರೀತಿ ಇದೆ : ಮಾನವ ಹಕ್ಕುಗಳೇ ಇಲ್ಲದ ಈ ಜಗತ್ತಿನಲ್ಲಿ ಹಲವು ವರ್ಷಗಳ ಹಿಂದೆ ವನ್ಯ ಮೃಗವನ್ನು ಕೊಂದ ಕಾರಣಕ್ಕೆ ಒಬ್ಬ ಮಹೋನ್ನತ ವ್ಯಕ್ತಿಗೆ (ಸಲ್ಮಾನ್‌ಗೆ) ವನ್ಯಮೃಗಗಳ ಹಕ್ಕಿನಡಿ ಶಿಕ್ಷಿಸಲಾಗಿದೆ; ನನ್ನನ್ನು ನೀವು ಹೇಗೆ ಬೇಕಾದರೂ ಬೈದು ಖಂಡಿಸಿರಿ; ಆದರೆ ಹೀಗೆ ಒಬ್ಬ ಒಳ್ಳೆಯ ಮನುಷ್ಯನನ್ನು ಶಿಕ್ಷಿಸುವುದು ಸಂಪೂರ್ಣವಾಗಿ ತಪ್ಪು. ಇಂತಹ ಒಳ್ಳೆಯ ಮನುಷ್ಯರು ನಮ್ಮ ಘನತೆ ಗೌರವವನ್ನು ಉಳಿಸುವರಾಗಿದ್ದಾರೆ’.

ಸಲ್ಮಾನ್‌ ಗೆ ಪಾಕ್‌ ನಟಿ ಮಾವ್ರಾ ಬೆಂಬಲ ನೀಡಿರುವುದನ್ನು ಹಲವರು ಸ್ವಾಗತಿಸಿ ಮೆಚ್ಚಿಕೊಂಡಿದ್ದಾರೆ. ಆದರೆ ಅದೇ ರೀತಿ ಇನ್ನು ಹಲವರು ಈಕೆಯದ್ದೊಂದು ಪಬ್ಲಿಸಿಟಿ ಸ್ಟಂಟ್‌ ಎಂದು ಕಟಕಿಯಾಡಿದ್ದಾರೆ.

-ಉದಯವಾಣಿ

Comments are closed.