ರಾಷ್ಟ್ರೀಯ

ಧೂಳುಮಯ ದಿಲ್ಲಿ: ವಿಮಾನ ಸಂಚಾರ ವಿಳಂಬ

Pinterest LinkedIn Tumblr


ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಶುಕ್ರವಾರ ಸಂಜೆ ಏಕಾಏಕಿ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಸಂಪೂರ್ಣ ಧೂಳುಮಯವಾಗಿದ್ದು, ಸಂಚಾರಕ್ಕೆ ಭಾರಿ ತೊಂದರೆ ಉಂಟಾಗಿದೆ.

ಸಂಪೂರ್ಣ ಧೂಳು ಆವರಿಸಿಕೊಂಡಿದ್ದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.

ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿಯೂ ಧೂಳು ತುಂಬಿದ್ದರಿಂದ ಕೆಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ರೈಸಿನಾ ಹಿಲ್‌ ಕಾಂಪ್ಲೆಕ್ಸ್, ಸಂಸತ್‌ ಭವನದ ಆಸುಪಾಸಿನ ಸರಕಾರಿ ಕಟ್ಟಡಗಳೂ ಧೂಳುಮಯವಾಗಿವೆ.

ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳದಿಂದ ತತ್ತರಿಸಿದ್ದ ದಿಲ್ಲಿ ನಾಗರಿಕರಿಗೆ ಈ ಹವಾಮಾನ ಬದಲಾವಣೆ ತುಸು ನೆಮ್ಮದಿ ತಂದಿದ್ದರೂ ಧೂಳುಮಯವಾಗಿರುವುದು ಮತ್ತೊಂದು ಸಮಸ್ಯೆ ಎದುರಿಸುವಂತಾಗಿದೆ.

ಕಳೆದ ಗುರುವಾರವೇ ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕೆಲವು ದಿನಗಳಿಂದ ದಿಲ್ಲಿಯಲ್ಲಿ ತಾಪಮಾನ 36 ಡಿಗ್ರಿ ಆಸುಪಾಸಿನಲ್ಲಿತ್ತು.

Comments are closed.