ರಾಷ್ಟ್ರೀಯ

ಐಪಿಎಲ್ ರದ್ಧತಿಗೆ ತಮಿಳುನಾಡು ರಾಜಕೀಯ ಪಕ್ಷಗಳ ಒತ್ತಾಯ

Pinterest LinkedIn Tumblr


ಚೆನೈ: ಕಾವೇರಿ ವಿಷಯವಾಗಿ ತಮಿಳುನಾಡಿನ ರಾಜಕೀಯ ಪಕ್ಷಗಳು ಕಾವೇರಿ ಕಾರ್ಯನಿರ್ವಾಹಕ ಮಂಡಳಿ ಸ್ಥಾಪನೆಯಾಗುವರೆಗೂ ಚೆನೈನಲ್ಲಿ ಐಪಿಎಲ್ ಪಂದ್ಯಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿವೆ.

ತಮಿಳುನಾಡು ಜನರ ಜೀವನ ಮತ್ತು ಪರಿಗಣಿಸಿದೆ ಇರುವ ಕೇಂದ್ರವನ್ನು ಖಂಡಿಸುವ ಸಲುವಾಗಿ ಹಾಗೂ ಇಲ್ಲಿ ಸೃಷ್ಟಿಯಾಗಿರೋ ಪರಿಸ್ಥಿತಿಯಿಂದ ಐಪಿಎಲ್ ಪಂದ್ಯಗಳನ್ನು ನಿಷೇಧಿಸಬೇಕು. ಒಂದು ವೇಳೆ ಬಿಸಿಸಿಐ ಐಪಿಲ್ ಲೀಗ್ ನಡೆಸಿದರೆ, ತಮಿಳುನಾಡಿನ ಸರ್ಕಾರ ಮತ್ತು ಪೊಲೀಸ್ ಸಹಕರಿಸುತ್ತಾರೆ. ಬಳಿಕೆ ರೈತ ಬೆಳೆದ ಬೆಳೆಗಳನ್ನು ತಿನ್ನುವ ಜನತೆ, ಟಿಕೆಟ್ ಖರೀದಿಸಿ, ಕ್ರೀಡಾಂಗಣಕ್ಕೆ ತೆರಳಿ ಪ್ರಜಾಪ್ರಭುತ್ವದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಾರೆ. ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗದಂತೆ ಮೊದಲೇ ಸರಕಾರ, ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಲಿ. ವೇಳೆ ನಮ್ಮ ಮನವಿ ತಿರಸ್ಕರಕೊಳ್ಳಗಾದರೆ, ಬೀದಿಗಿಳಿಯಲು ಸಿದ್ಧ ಎಂದು ಟಿವಿಕೆ ಪಕ್ಷದ ನಾಯಕ ಪನ್ರುತಿ ಟಿ ವೇಲ್‌ಮುರುಗನ್ ತಿಳಿಸಿದ್ದಾರೆ.

ತಮಿಳುನಾಡಿನ ಪಕ್ಷಗಳಾದ ದ್ರಾವಿಡ ವಿದುತಾಲೈ ಕಳಗಂ, ತಮಿಳಾಂಘ ವಾಳುಮುರಿಮೈ ಪಕ್ಷ(ಟಿವಿಕೆ), ವಿದುತಾಲೈ ತಮಿಳ ಪುಲಿಗಲ್ ಪಕ್ಷ, ತಮಿಳರ್ ವಿದ್ಯಾಯಲ್ ಪಕ್ಷ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಂತಾದ ಪಕ್ಷಗಳು ಐಪಿಎಲ್ ರದ್ಧತಿಗೆ ಮನವಿ ಸಲ್ಲಿಸಿದೆ.

Comments are closed.