ರಾಷ್ಟ್ರೀಯ

ಇಂದೋರ್: ಕಾರು ಗುದ್ದಿದ ರಭಸಕ್ಕೆ ನಾಲ್ಕು ಹಂತಸ್ತಿನ ಕಟ್ಟಡ ಕುಸಿತ; 10 ಮಂದಿ ದುರ್ಮರಣ

Pinterest LinkedIn Tumblr

ಇಂದೋರ್: ವೇಗವಾಗಿ ಬಂದ ಕಾರೊಂದು ಗುದ್ದಿದ ಪರಿಣಾಮ ನಾಲ್ಕು ಹಂತಸ್ತಿನ ಹಳೆಯ ಕಟ್ಟಡವೊಂದು ಕುಸಿದು 10 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಕಳೆದ ರಾತ್ರಿ ಸಾರ್ವಟೆ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಲಾಡ್ಜ್ ಮತ್ತು ಹೋಟೆಲ್ ಗಳು ಇದ್ದವು. ಹಳೆಯ ಕಟ್ಟವಾಗಿದ್ದರಿಂದ ಕಾರು ಗುದ್ದಿದ ತಕ್ಷಣ ಕಟ್ಟಡ ನೆಲಕ್ಕುರುಳಿದೆ.

ಕಟ್ಟಡ ಕುಸಿತದ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದ್ದಾರೆ. ಕಟ್ಟಡದ ಅವಶೇಷಗಳಡಿಯಲ್ಲಿ ಇನ್ನೂ 20 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಸಾವು ನೋವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಡಿಐಜಿ ಹರಿನಾರಾಯಣ ಮಿಶ್ರಾ ತಿಳಿಸಿದ್ದಾರೆ.

Comments are closed.