ರಾಷ್ಟ್ರೀಯ

ಜಮ್ಮು ಕಾಶ್ಮೀರದಲ್ಲಿ 11 ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

Pinterest LinkedIn Tumblr

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧರು ಭರ್ಜರಿ ಬೇಟೆಯಾಡಿದ್ದು ಹನ್ನೊಂದು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ದ್ರಾಗದ್ ಮತ್ತು ಕಚ್ ದೋರಾ ಹಳ್ಳಿಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಹಿಜ್ಬುಲ್ ಮುಜಾಯಿದ್ದೀನ್ ಮತ್ತು ಲಷ್ಕರ್ ಇ ತೊಯ್ಬಾಗೆ ಸೇರಿದ ಉಗ್ರರನ್ನು ಹೊಡೆದುರುಳಿಸಲಾಗಿದೆ.

ಗುಂಡಿನ ಕಾರ್ಯಾಚರಣೆಯಲ್ಲಿ ಮೂವರು ಭಾರತೀಯ ಯೋಧರು ಗಾಯಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ 44ನೇ ರಾಷ್ಟ್ರೀಯ ರೈಫಲ್ಸ್, 3ನೇ ರಾಷ್ಟ್ರೀಯ ರೈಫಲ್ಸ್, 34ನೇ ರಾಷ್ಟ್ರೀಯ ರೈಫಲ್ಸ್ ಹಾಗೂ ಸಿಆರ್ಪಿಎಫ್ನ ಯೋಧರು ಪಾಲ್ಗೊಂಡಿದ್ದಾರೆ.

Comments are closed.