ರಾಷ್ಟ್ರೀಯ

ಜಿಯೋ ಪ್ರೈಮ್ ವ್ಯಾಲಿಡಿಟಿ ಒಂದು ವರ್ಷ ವಿಸ್ತರಣೆ

Pinterest LinkedIn Tumblr


ಹೊಸದಿಲ್ಲಿ: 4ಜಿ ಕ್ಷೇತ್ರದಲ್ಲಿ ತಲ್ಲನ ಮೂಡಿಸಿರುವ ರಿಲಯನ್ಸ್ ಜಿಯೋ, ತನ್ನ ಪ್ರೈಮ್ ಗ್ರಾಹಕರ ಮೆಂಬರ್‌ಶಿಪ್ ಸೇವೆಯನ್ನು ಮತ್ತಷ್ಟು ಒಂದು ವರ್ಷಗಳ ಕಾಲ ವಿಸ್ತರಿಸಿದೆ.

ಯಾವುದೇ ಹೆಚ್ಚುವರಿ ಶುಲ್ಕದ ಪಾವತಿ ಇಲ್ಲದೆ ಈ ಸೇವೆಯನ್ನು ನೀಡಲಾಗುತ್ತದೆ. ಈ ಮೂಲಕ ಪ್ರೈಮ್ ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಾಗುತ್ತದೆ. ಈ ಬಗ್ಗೆ ಜಿಯೋ ಆ್ಯಪ್‌ನಲ್ಲಿ ಸಮಗ್ರ ಮಾಹಿತಿ ಪಡೆಯಬಹುದಾಗಿದೆ.

ಪ್ರಸ್ತುತ 19 ರೂ.ಗಳಿಂದ ಹಿಡಿದು 9,999 ರೂ.ಗಳ ವರೆಗೆ ಪ್ಲ್ಯಾನ್ ಇದೆ. ಈ ಪೈಕಿ 19 ಹಾಗೂ 52 ರೂ.ಗಳ ಪ್ಲ್ಯಾನ್ ಮೂಲಕ ಗ್ರಾಹಕರು ಪ್ರತಿ ದಿನ 150ಎಂಬಿ ಡೇಟಾ ಪಡೆಯಬಹುದಾಗಿದೆ. ಇವುಗಳು ಅನುಕ್ರಮವಾಗಿ ಒಂದು ಹಾಗೂ ಏಳು ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ.

ಇನ್ನು ದೈನಿಕ 1.5 ಜಿಬಿ ಡೇಟಾ ನೀಡುವ ನಾಲ್ಕು ಪ್ಲ್ಯಾನ್‌ಗಳು ಚಾಲ್ತಿಯಲ್ಲಿದೆ. 149 ರೂ., 349 ರೂ., 399 ರೂ. ಹಾಗೂ 499 ರೂ.ಗಳ ಪ್ಲ್ಯಾನ್‌ಗಳು ಅನುಕ್ರಮವಾಗಿ 28 ದಿವಸ, 70 ದಿವಸ 84 ದಿವಸ ಹಾಗೂ 91 ದಿವಸಗಳಿಗೆ ವ್ಯಾಲಿಡಿಟಿ ಇರುತ್ತದೆ.

ಅಂತೆಯೇ ದೈನಂದಿನ ಎರಡು ಜಿಬಿ ನೀಡುವ ಡೇಟಾ ಪ್ಲ್ಯಾನ್‌ಗಳು 198 ರೂ. (28 ದಿವಸ ವ್ಯಾಲಿಡಿಟಿ), 398 ರೂ. (70 ದಿನ ವ್ಯಾಲಿಡಿಟಿ), 448 ರೂ. (84 ದಿನ ವ್ಯಾಲಿಡಿಟಿ) ಹಾಗೂ 498 ರೂ. ಪ್ಲ್ಯಾನ್ (91 ದಿನ ವ್ಯಾಲಿಡಿಟಿ) ಚಾಲ್ತಿಯಲ್ಲಿದೆ.

Comments are closed.