ರಾಷ್ಟ್ರೀಯ

2017ರಲ್ಲಿ ಅರೆ ಸೇನಾ ಪಡೆಯಲ್ಲಿ ಗರಿಷ್ಠ ಸ್ವಯಂ ನಿವೃತ್ತಿ, ರಾಜೀನಾಮೆ!

Pinterest LinkedIn Tumblr


ಹೊಸದಿಲ್ಲಿ: ದೇಶದ ಬಲಿಷ್ಠ ಅರೆ ಸೈನಿಕ ದಳದಲ್ಲಿ ಈ ಹಿಂದೆಂದಿಗಿಂತಲೂ ಅತೀ ಹೆಚ್ಚು ಸ್ವಯಂ ನಿವೃತ್ತಿ ಮತ್ತು ರಾಜೀನಾಮೆಯ ಪ್ರಕರಣಗಳು 2017ರಲ್ಲಿ ದಾಖಲಾಗಿವೆ.

ಗಡಿ ಭದ್ರತಾ ಪಡೆ (ಬಿ ಎಸ್‌ ಎಫ್) ಮತ್ತು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್) ನಲ್ಲಿ 2017ರಲ್ಲಿ ಅತ್ಯಧಿಕ ನಿರ್ಗಮನಗಳು ಸಂಭವಿಸಿವೆ ಎಂದು ಲೋಕಸಭೆಗೆ ಇಂದು ತಿಳಿಸಲಾಯಿತು.

2015ರಲ್ಲಿ 909 ಬಿ ಎಸ್‌ ಎಫ್ ಸಿಬಂದಿ ಸ್ವಯಂ ನಿವೃತ್ತಿ ಪಡೆದಿದ್ದರೆ ಅಥವಾ ರಾಜೀನಾಮೆ ನೀಡಿದ್ದರೆ, 2017ರಲ್ಲಿ ಇದು 6,415ಕ್ಕೆ ಏರಿತು.

ಸಿಆರ್‌ಪಿಎಫ್ ನಲ್ಲೂ 2015ರಲ್ಲಿ 1,376 ಸಿಬಂದಿಗಳ ನಿರ್ಗಮನವಾದರೆ 2017ರಲ್ಲಿ ಅದು 5,123ಕ್ಕೆ ಏರಿತು ಎಂದು ಸರಕಾರ ಹೇಳಿತು.

ಇದೇ ರೀತಿಯಲ್ಲಿ ಏರಿದ ನಿರ್ಗಮನ ಪ್ರವೃತ್ತಿಯು ಇಂಡೋ ಟಿಬೆಟಾನ್‌ ಬಾರ್ಡರ್‌ ಪೊಲೀಸ್‌, ಸಶಸ್ತ್ರ ಸೀಮಾಬಲ (ಎಸ್‌ಎಸ್‌ಬಿ), ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯುರಿಟಿ ಫೋರ್ಸ್‌ ಮತ್ತು ಅಸ್ಸಾಂ ರೈಫ‌ಲ್ಸ್‌ ನಲ್ಲೂ ಕಂಡು ಬಂತೆಂದು ಸರಕಾರ ಹೇಳಿತು.

-ಉದಯವಾಣಿ

Comments are closed.