ರಾಷ್ಟ್ರೀಯ

ಫೋರ್ಬ್ಸ್ ಏಷ್ಯಾದ 30ರೊಳಗಿನ ಪಟ್ಟಿಯಲ್ಲಿ ಸ್ಥಾನ ಪಡೆದ ಅನುಷ್ಕಾ ಶರ್ಮ, ಪಿ.ವಿ.ಸಿಂಧು !

Pinterest LinkedIn Tumblr

ನವದೆಹಲಿ: ಫೋರ್ಬ್ಸ್ ಮ್ಯಾಗಜಿನ್ ನ 2018ರ ಏಷ್ಯಾದ 30 ಸಾಧನೆ ಮಾಡಿದ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸೇರಿದ್ದಾರೆ.

13 ವಿಭಾಗಗಳಲ್ಲಿ 300ಕ್ಕೂ ಹೆಚ್ಚು ಉದ್ಯಮಿಗಳು ಮತ್ತು ಸಂಶೋಧಕರು ಸೇರಿಕೊಂಡಿದ್ದಾರೆ.
ಫೋರ್ಬ್ಸ್ ಮ್ಯಾಗಜಿನ್ ನ ಏಷ್ಯಾದ 30ರೊಳಗಿನ ಪಟ್ಟಿಯಲ್ಲಿರುವವರಲ್ಲಿ ಸಾಧನೆಗಳು, ಅವರ ಸಾಮರ್ಥ್ಯ, ವ್ಯವಹಾರದ ಚತುರತೆ ಅಥವಾ ಕೆಲಸದ ವಿಧಾನವನ್ನು ನೋಡಿಕೊಂಡು ಸ್ಥಾನ ನೀಡಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

ಮನರಂಜನೆ, ಹಣಕಾಸು, ಸಾಹಸೋದ್ಯಮ ಬಂಡವಾಳ, ಚಿಲ್ಲರೆ ವ್ಯಾಪಾರ, ಸಾಮಾಜಿಕ ಉದ್ಯಮಿಗಳು ಮತ್ತು ಉದ್ಯಮ ತಂತ್ರಜ್ಞಾನ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿದೆ.

ಮೊದಲ ಸ್ಥಾನದಲ್ಲಿ ಫುಡ್ ಟಾಕ್ ಇಂಡಿಯಾದ ಸಹ ಸ್ಥಾಪಕಿ ಅಂಜಲಿ ಭಾತ್ರ, ರೂಪದರ್ಶಿ ಭೂಮಿಕ ಅರೋರ ಇದ್ದಾರೆ.

Comments are closed.