ರಾಷ್ಟ್ರೀಯ

ಮೋದಿ ಬಿಗ್‌ಬಾಸ್‌, ರಾಹುಲ್‌ ಛೋಟಾ ಭೀಮ್‌!

Pinterest LinkedIn Tumblr


ಹೊಸದಿಲ್ಲಿ: ಆ್ಯಪ್‌ ಬಳಕೆದಾರರ ಮಾಹಿತಿ ಸೋರಿಕೆ ವಿಚಾರಕ್ಕೆ ಸಂಬಂಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಮಾತಿನ ಜಟಾಪಟಿ ಸೋಮವಾರ ತಾರಕ್ಕೇರಿದೆ. ಉಭಯ ನಾಯಕರ ಮಾತಿನ ಕದನದಲ್ಲಿ ‘ಬಿಗ್‌ಬಾಸ್‌’ ಮತ್ತು ‘ಛೋಟಾಬೀಮ್‌’ ಪಾತ್ರಗಳೂ ಆವಾಹನೆಯಾಗಿವೆ. ರಾಹುಲ್‌ ಗಾಂ ಅವರನ್ನು ‘ತಾಂತ್ರಿಕ ಅನಕ್ಷರಸ್ಥ’ ಎಂದು ಕರೆಯುವ ಮೂಲಕ ಟಿಎಂಸಿ ಸಹ ಮಾತಿನ ಸಮರಕ್ಕೆ ಕೈ ಜೋಡಿಸಿದೆ.

ಪ್ರಧಾನಿ ಅವರ ‘ನಮೋ ಆ್ಯಪ್‌’ ಮೂಲಕ ಬಳಕೆದಾರರ ಮಾಹಿತಿ ಕದಿಯಲಾಗುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ಕಾಂಗ್ರೆಸ್‌ನ ‘ವಿತ್‌ಐಎನ್‌ಸಿ’ ಆ್ಯಪ್‌ ವಿರುದ್ಧ ಇಂಥದ್ದೇ ಆಪಾದನೆ ಮಾಡಿದೆ.

ಮೋದಿ ಅವರ ‘ನಮೋ’ ಆ್ಯಪ್‌ ರಹಸ್ಯವಾಗಿ ನಿಮ್ಮ ಆಡಿಯೊ, ವಿಡಿಯೊ, ಸ್ನೇಹಿತರು ಮತ್ತು ಕುಟುಂಬದವರ ಫೋನ್‌ ನಂಬರ್‌ ಕದಿಯುತ್ತಿದೆ. ಮೋದಿ ಅವರು ಭಾರತೀಯರ ಮೇಲೆ ರಹಸ್ಯ ಕಣ್ಣಿಟ್ಟಿರುವ ‘ಬಿಗ್‌ಬಾಸ್‌’.

– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

ರಾಹುಲ್‌ ಗಾಂಜೀ, ‘ಆ್ಯಪ್‌’ ಇನ್‌ಸ್ಟಾಲೆಷನ್‌ ವೇಳೆ ಸಾಮಾನ್ಯ ಪರ್ಮಿಷನ್‌ಗಳನ್ನು ಕೇಳುವುದು ಮಾಹಿತಿ ಕದಿಯುವಿಕೆಗೆ ಸಮನಲ್ಲ ಎಂಬುದು ‘ಛೋಟಾ ಭೀಮ್‌’ಗೂ ಗೊತ್ತಿರುವ ವಿಷಯ.

Comments are closed.