ರಾಷ್ಟ್ರೀಯ

Boyfriend ಮಾಡಿಕೊಳ್ಳಬೇಡಿ: ಹುಡುಗಿಯರಿಗೆ ಬಿಜೆಪಿ ಶಾಸಕನ ಸಲಹೆ

Pinterest LinkedIn Tumblr


ಗುಣ, ಮಧ್ಯಪ್ರದೇಶ: ‘ಹುಡುಗಿಯರು ಬಾಯ್‌ ಫ್ರೆಂಡ್‌ ಮಾಡಿಕೊಳ್ಳಬಾರದು. ಆಗ ಮಾತ್ರವೇ ಅವರ ಮೇಲಿನ ದೌರ್ಜನ್ಯ ತಪ್ಪಲು ಮತ್ತು ಅವರು ಸುರಕ್ಷಿತರಾಗಿರಲು ಸಾಧ್ಯವಾಗುತ್ತದೆ’ ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕ ಪಿ ಎಲ್‌ ಶಾಕ್ಯ ಹೇಳಿದ್ದಾರೆ.

“ಹುಡುಗಿಯರು ಯಾಕೆ ಬಾಯ್‌ ಫ್ರೆಂಡ್‌ ಮಾಡಿಕೊಳ್ಳಬೇಕು ? ಹಾಗೆ ಮಾಡುವುದನ್ನು ಅವರು ನಿಲ್ಲಿಸಿದರೆ ಮಾತ್ರವೇ ಅವರ ಮೇಲೆ ದೌರ್ಜನ್ಯ ನಡೆಯುವುದು ತಪ್ಪುತ್ತದೆ’ ಎಂದು ಶಾಸಕ ಶಾಕ್ಯ ಅವರು ಗುಣ ಸರಕಾರಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.

‘ಹುಡುಗರು ಕೂಡ ಪಾಶ್ಚಾತ್ಯ ಸಂಸ್ಕೃತಿಯಿಂದ ದೂರ ಇರಬೇಕು. ಅವರಿಗಾದರೂ ಗರ್ಲ್ ಫ್ರೆಂಡ್‌ ಯಾಕಿರಬೇಕು ?’ ಎಂದು ಶಾಕ್ಯ ಪ್ರಶ್ನಿಸಿದರು.

‘ನಮ್ಮ ದೇಶದ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಅಪಾರ ಗೌರವವಿದೆ. ವರ್ಷಕ್ಕೆ ನಾಲ್ಕು ಅವರನ್ನು ಪೂಜಿಸುವ ಕ್ರಮವಿದೆ. ಹಾಗಿರುವ ವರ್ಷಕ್ಕೊಂದು ಬಾರಿ ಆಚರಿಸಲ್ಪಡುವ ಅಂತಾರಾಷ್ಟ್ರೀಯ ಮಹಿಳಾ ದಿನ ಭಾರತದ ಮಟ್ಟಿಗೆ ಅಗತ್ಯವಿಲ್ಲ’ ಎಂದು ಶಾಕ್ಯ ನುಡಿದರು.

‘ನಮ್ಮ ದೇಶದಲ್ಲಿ ಭಗವಾನ್‌ ರಾಮ, ಕೃಷ್ಣ, ಯುಧಿಷ್ಠಿರ ಮುಂತಾಗಿ ಎಲ್ಲ ದೈವೀ ಪುರುಷರು ಭಾರತದಲ್ಲೇ ಮದುವೆಯಾಗಿದ್ದಾರೆ. ಅವರಾರೂ ವಿದೇಶಕ್ಕೆ ಹೋಗಿ ಮದುವೆಯಾಗಿಲ್ಲ. ಕ್ರಿಕೆಟಿಗ ವಿರಾಟ್‌ ಕೊಹ್ಲಿ – ಅನುಷ್ಕಾ ಅವರು ಭಾರತದಲ್ಲಿ ಮದುವೆಯಾಗುವುದನ್ನು ಬಿಟ್ಟು ವಿದೇಶಕ್ಕೆ (ಇಟಲಿಗೆ) ಹೋಗಿ ಮದುವೆಯಾಗಿರುವುದು ತಪ್ಪು’ ಎಂದು ಶಾಕ್ಯ ನುಡಿದರು.

-ಉದಯವಾಣಿ

Comments are closed.