ರಾಷ್ಟ್ರೀಯ

ಜಗತ್ತಿನ ಅತ್ಯಂತ ಪುರಾತನ ನಗರವೀಗ ‘ವೈರ್‌ಲೆಸ್‌’ ಸಿಟಿ

Pinterest LinkedIn Tumblr


ವಾರಾಣಸಿ: ಜಗತ್ತಿನ ಅತ್ಯಂತ ಹಳೆಯ ನಗರ ಎಂಬ ಖ್ಯಾತಿ ಪಡೆದ ವಾರಣಾಸಿಗೆ 86 ವರ್ಷಗಳ ಹಿಂದೆ ವಿದ್ಯುತ್‌ ಬಂದಿತ್ತು. ಇದೀಗ ಆಧುನೀಕರಣದ ಹಾದಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರ, ತಲೆಯ ಮೇಲೆ ಹಾದು ಹೋಗುವ ವಿದ್ಯುತ್‌ ತಂತಿಗಳಿಂದ ಮುಕ್ತವಾಗಲು ಸಜ್ಜಾಗಿದೆ.

ಈಗಾಗಲೇ 16 ಚದರ ಕಿ.ಮೀ ವ್ಯಾಪ್ತಿಯಲ್ಲಿ ಭೂಗತ ವಿದ್ಯುತ್‌ ಕೇಬಲ್‌ಗಳ ಅಳವಡಿಕೆ ಪೂರ್ಣಗೊಂಡಿದೆ. ಕಿರಿದಾದ ಓಣಿಗಳು ಮತ್ತು ಇಕ್ಕಟ್ಟಾದ ಮಾರುಕಟ್ಟೆಗಳನ್ನು ಒಳಗೊಂಡ ನಗರದಲ್ಲಿ ಭೂಹತ ಕೇಬಲ್‌ಗಳನ್ನು ಅಳವಡಿಸುವುದು ವಿದ್ಯುತ್‌ ಜಾಲಕ್ಕೆ ಬಹುದೊಡ್ಡ ಸವಾಲೇ ಆಗಿದೆ.

‘ಜನಸಂಖ್ಯಾ ದೃಷ್ಟಿಯಿಂದ ಸಿಯೋಲ್‌ ಮತ್ತು ಟರ್ಕಿ ದೇಶದ ನದಿ ನಡದಲ್ಲಿರುವ ಕೆಲವು ನಗರಗಳು ಸಂಕೀರ್ಣವಾಗಿವೆ. ಏಕೀಕೃತ ವಿದ್ಯುತ್‌ ಅಭಿವೃದ್ಧಿ ಯೋಜನೆ (ಇಂಟಿಗ್ರೇಟೆಡ್‌ ಪವರ್‌ ಡೆವಲಪ್‌ಮೆಂಟ್‌ ಸ್ಕೀಂ- IPDS) ಅಡಿಯಲ್ಲಿ ವಿದ್ಯುತ್‌ ಜಾಲವನ್ನು ಮೇಲ್ದರ್ಜೆಗೇರಿಸುವಾಗ ಇದು ಎಷ್ಟೊಂದು ಸಂಕೀರ್ಣ ನಗರ ಎಂಬುದು ನಮಗೆ ಮನವರಿಕೆಯಾಯಿತು’ ಎಂದು ಪವರ್‌ಗ್ರಿಡ್‌ನ ಐಪಿಡಿಎಸ್‌ ಯೋಜನಾಧಿಕಾರಿ ಸುಧಾಕರ್‌ ಗುಪ್ತಾ ಹೇಳುತ್ತಾರೆ. ಇಲ್ಲಿ ಯೋಜನೆ ಪೂರ್ಣಗೊಳಿಸಲು ಎರಡು ವರ್ಷ ಬೇಕಾಯಿತು. 2017ರ ಡಿಸೆಂಬರ್‌ಗೆ ಭೂಗತ ಕೇಬಲ್‌ ಅಳವಡಿಕೆ ಪೂರ್ಣಗೊಂಡಿತು.

ವಿದ್ಯುತ್‌ ಮತ್ತು ಕಲ್ಲಿದ್ದಲು ಖಾತೆಯ ಆಗಿನ ಸಚಿವರಾಗಿದ್ದ ಪೀಯೂಷ್‌ ಗೋಯಲ್‌ ಈ ಯೋಜನೆಗೆ 2015ರ ಜೂನ್‌ನಲ್ಲಿ 432 ಕೋಟಿ ರೂ ಒದಗಿಸಿದ್ದರು. ಪ್ರಧಾನಿ ನರೇಂದ್ರ ಮೋದಿ 2015ರ ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ 45,000 ಕೋಟಿ ರೂ ವೆಚ್ಚದ ಐಪಿಡಿಎಸ್‌ ಯೋಜನೆಯನ್ನು ವಾರಾಣಸಿಯಲ್ಲಿ ಉದ್ಘಾಟಿಸಿದ್ದರು. ಕಬೀರ್‌ ನಗರ್‌ ಮತ್ತು ಅನ್ಸಾರಾಬಾದ್‌ನಲ್ಲಿ ಪೈಲಟ್‌ ಯೋಜನೆ ಜಾರಿಗೊಳಿಸಲಾಗಿತ್ತು.

2015ರ ಡಿಸೆಂಬರ್‌ ಕಾಮಗಾರಿ ಆರಂಭವಾಯಿತು. ಸಚಿವ ಗೋಯಲ್‌ ಆಗಾಗ್ಗೆ ನಗರಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸುತ್ತಿದ್ದರು. ಎರಡು ವರ್ಷಗಳ ಗಡುವು ನೀಡಲಾಗಿದ್ದರೂ ಒಂದು ವರ್ಷ ಮೊದಲೇ ಕಾಮಗಾರಿ ಪೂರ್ಣಗೊಂಡಿದೆ.

Comments are closed.