ರಾಷ್ಟ್ರೀಯ

ಪಾಕ್‌ ಹಾರಿಸುವ 1 ಗುಂಡಿಗೆ ಪ್ರತ್ಯುತ್ತರವಾಗಿ 1 ಬಾಂಬ್‌ ಹಾಕಬೇಕು

Pinterest LinkedIn Tumblr


ಹೊಸದಿಲ್ಲಿ: ‘ಪಾಕಿಸ್ಥಾನ ಗಡಿಯಲ್ಲಿ ಹಾರಿಸುವ 1 ಗುಂಡಿಗೆ ಪ್ರತ್ಯುತ್ತರವಾಗಿ 1 ಬಾಂಬ್‌ ಹಾರಿಸಬೇಕು’ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಹೇಳಿಕೆ ನೀಡಿದ್ದಾರೆ.

ಮಾಧ್ಯಮವೊಂದರಲ್ಲಿ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದು, ‘ಸೈನಿಕರು ಗುಂಡಿಗೆ ಪ್ರತಿಯಾಗಿ ಬಾಂಬ್‌ನ ಉತ್ತರ ನೀಡಬೇಕು. ಹೀಗೆ ಮಾಡುವುದರಿಂದ ಮಾತ್ರ ಗಡಿಯಾಚೆಗಿನ ಭಯೋತ್ಪಾದನೆಯನ್ನು ಮಟ್ಟ ಹಾಕಲು ಸಾಧ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಗುಂಡು ಮತ್ತು ಬಾಂಬ್‌ಗಳು ಸಿಡಿಯುತ್ತಿರುವ ವೇಳೆಯಲ್ಲಿ ಶಾಂತಿ ಮಾತುಕತೆ ನಡೆಸುವುದು ಅಸಾಧ್ಯವಾದ ಮಾತು’ಎಂದು ಶಾ ಹೇಳಿದರು.

‘ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದರು.

-ಉದಯವಾಣಿ

Comments are closed.