ರಾಷ್ಟ್ರೀಯ

ಉಗ್ರರಿಗೆ ಹಣಕಾಸು ನೆರವು:ಯುಪಿ ಎಟಿಎಸ್‌ನಿಂದ 10 ಮಂದಿ ಸೆರೆ

Pinterest LinkedIn Tumblr


ಲಕ್ನೋ: ಮಹತ್ವದ ಕಾರ್ಯಾಚರಣೆ ನಡೆಸಿದ ಉತ್ತರಪ್ರದೇಶದ ಉಗ್ರ ನಿಗ್ರಹ ದಳ ಉಗ್ರ ಚಟುವಟಿಕೆಗೆ ಆರ್ಥಿಕ ನೆರವು ನೀಡಿದ ಆರೋಪದಲ್ಲಿ 10 ಮಂದಿಯನ್ನು ಭಾನುವಾರ ವಶಕ್ಕೆ ಪಡೆದಿದ್ದಾರೆ.

ಉತ್ತರಪ್ರದೇಶದ ಗೋರಖ್‌ಪುರ್‌, ಪ್ರತಾಪ್‌ಘಡ ಮತ್ತು ಲಕ್ನೋ ಮತ್ತು ಮಧ್ಯಪ್ರದೇಶದ ರಿವಾದಲ್ಲಿ ಕಾರ್ಯಾಚರಣೆ ನಡೆಸಿ 10 ಮಂದಿಯನ್ನು ಅಪಾರ ಪ್ರಮಾಣದ ಹಣ, ಲ್ಯಾಪ್‌ಟಾಪ್‌ಗ್ಳು ಮತ್ತು ಎಟಿಎಂಗಳೊಂದಿಗೆ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಭಾರತದ ವಿವಿಧ ಸ್ಥಳಗಳಲ್ಲಿ ನಡೆದ ಉಗ್ರ ಚಟುವಟಿಕೆಗೆ ನೆರವು ನೀಡಿದ ಆರೋಪದಲ್ಲಿ ವಶಕ್ಕೆ ಪಡೆಯಲಾಗಿದೆ.

2011 ಎಪ್ರಿಲ್‌ನಲ್ಲಿ ಎನ್‌ಐಎ ದಾಖಲಿಸಿಕೊಂಡಿರುವ ಉಗ್ರರ ಹಣಕಾಸು ನೆರವು ಪ್ರಕರಣದ ತನಿಖೆ ವೇಳೆ ಕಾರ್ಯಾಚರಣೆ ನಡೆಸಲಾಗಿದೆ.

-ಉದಯವಾಣಿ

Comments are closed.