ರಾಷ್ಟ್ರೀಯ

ಕೇರಳ ಮರ್ಯಾದಾ ಹತ್ಯೆ: ನೊಂದ ವರ ಮದುವೆ ಸೀರೆಯಿಂದ ನೇಣಿಗೆ ಶರಣು!

Pinterest LinkedIn Tumblr


ಮಲ್ಲಾಪುರಂ: ಮದುವೆಗೆ ಕೆಲವೇ ಕೆಲವು ಗಂಟೆಗಳು ಬಾಕಿಯಿರುವಾಗಲೇ ತನ್ನ 22 ವರ್ಷದ ಮಗಳನ್ನು ತಂದೆಯೇ ಹತ್ಯೆ ಮಾಡಿದ್ದರು. ಇದರಿಂದ ನೊಂದ ವರ ವಧುವಿಗೆ ತಂದಿದ್ದ ಸೀರೆಯಿಂದಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಕೇರಳದ ಅರೆಕೋಡ್ ನ ಪಾತನಾಪುರಂನ ಪೋವತಿಂಗಲ್ ನಿವಾಸಿಯಾಗಿದ್ದ ರಾಜನ್ ಎಂಬುವರು ದಲಿತ ಯುವಕನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲು ಇಷ್ಟವಿಲ್ಲದೆ ಮದುವೆಗೆ ಕೆಲ ಘಂಟೆಗಳು ಬಾಕಿ ಇರುವಾಗಲೇ ಮರ್ಯಾದಾ ಹತ್ಯೆ ಮಾಡಿದ್ದರು.

ಅತ್ತ ಪ್ರೀತಿಸಿದ ಯುವತಿಯನ್ನು ಬಾಳ ಸಂಗಾತಿಯಾಗಿ ಪಡೆಯುವ ಆಸೆ ಹೊತ್ತು ಮದುಮಗ ಮದುವೆಗೆ ಭರದ ಸಿದ್ದತೆ ಮಾಡಿಕೊಂಡಿದ್ದ, ಮನೆಯ ಮುಂದೆ ಚಪ್ಪರ ಹಾಕಲಾಗಿತ್ತು. ಬಂಧು ಬಳಗ ಮನೆಗೆ ಆಗಮಿಸಿದ್ದರು. ಈ ವೇಳೆ ತನ್ನ ಭಾವಿ ಪತ್ನಿಯ ಕೊಲೆಯಾಗಿದೆ ಎಂಬ ದುರ್ವಾತೆ ವರನ ಕಿವಿಗೆ ಮುಟ್ಟಿದೆ.
ಇದರಿಂದ ತೀವ್ರ ಮನನೊಂದ ವರ ಮದುವೆಗೆಂದು ತಂದಿದ್ದ ಸೀರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮರ್ಯಾದಾ ಹತ್ಯೆಗೆ ಬಲಿಯಾದವಳು 22 ವರ್ಷದ ಅತಿರಾ ರಾಜನ್. ಅತಿರಾ ದಲಿತ ಯುವಕ ಬ್ರಿಜೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತ ಬೇರೆ ಜಾತಿಯವನಾಗಿದ್ದ. ಆದರೆ ಆಕೆಯ ತಂದೆ ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಅತಿರಾ ಒತ್ತಡ ಹೇರುತ್ತಿದ್ದರಿಂದ ತಂದೆ ಮದುವೆಗೆ ಒಪ್ಪಿಕೊಂಡಿದ್ದರು. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಶುಕ್ರವಾರದಂದು ಮದುವೆ ನಿಗದಿಯಾಗಿತ್ತು.

Comments are closed.