ರಾಷ್ಟ್ರೀಯ

ಪಂಚಾಯಿತಿ ಪ್ರಮುಖರ ಆದೇಶ ಪಾಲನೆಗೆ ಪತ್ನಿಯನ್ನೇ ಹಿಗ್ಗಾಮುಗ್ಗ ಥಳಿಸಿದ ಪತಿ

Pinterest LinkedIn Tumblr


ಮೀರತ್‌: ಆಶ್ಚರ್ಯಕರ ಘಟನೆಯೊಂದರಲ್ಲಿ ಪಂಚಾಯಿತಿ ಪ್ರಮುಖರು ಆದೇಶ ನೀಡಿದರೆಂದು ತನ್ನ ಪತ್ನಿಯನ್ನು ಅಲ್ಲಿಯೇ ಥಳಿಸಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಮಾ. 10ರಂದು ಈ ಘಟನೆ ನಡೆದಿದ್ದು, ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಕರಣ ಸಂಬಂಧ ಗುರುವಾರ ಪೊಲೀಸರು 19 ಜನರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ಇದರಲ್ಲಿ ಏಳು ಜನರ ಹೆಸರಿದ್ದು, ಉಳಿದವರ ಹೆಸರು ತಿಳಿದಿಲ್ಲ.

ಏನಿದು ಘಟನೆ?

ಗ್ರಾಮದ ವ್ಯಕ್ತಿಯೊಂದಿಗೆ ಓಡಿಹೋಗಿದ್ದ ಮಹಿಳೆಯನ್ನು ಕರೆತಂದ ಗ್ರಾಮಸ್ಥರು ಸ್ಥಳೀಯ ಪಂಚಾಯಿತಿಯಲ್ಲಿ ನ್ಯಾಯ ತೀರ್ಮಾನಕ್ಕೆ ಮುಂದಾಗಿದ್ದರು. ಈ ವೇಳೆ ಮಹಿಳೆಯನ್ನು ಥಳಿಸುವಂತೆ ಆಕೆಯ ಪತಿಗೆ ಸೂಚಿಸಿದ್ದಾರೆ.

ವಿಡಿಯೋದಲ್ಲಿರುವಂತೆ ಅಲ್ಲಿ ನೆರೆದಿದ್ದ ಜನರಲ್ಲಿ ಯಾರೊಬ್ಬರು ಮಹಿಳೆಯ ಸಹಾಯಕ್ಕೆ ಬಂದಿಲ್ಲ. ಆಕೆಯ ಕೈಗಳನ್ನು ಕಟ್ಟಿ ಹಾಕಿ ಜೋರಾಗಿ ಕಿರುಚುತ್ತಾ ‘ ಈಗ ಓಡಿಹೋಗು, ಓಡಿಹೋಗಲು ಪ್ರಯತ್ನಿಸು’ ಎಂದು ಹಿಗ್ಗಾಮುಗ್ಗ ಥಳಿಸಿದ್ದಾನೆ.

ಮಹಿಳೆ ದೂರಿನ ಅನ್ವಯ ಎಫ್‌ಐಆರ್‌ನಲ್ಲಿ ಆಕೆಯ ಮನೆಯೊಳಗೆ ನುಗ್ಗಿದ ಕೆಲ ಪುರುಷರು ಆಕೆಗೆ ಕಿರುಕುಳ ನೀಡಿದ್ದಾರೆ. ಮಹಿಳೆಯು ಹಳ್ಳಿಯ ಯುವಕನೊಂದಿಗೆ ಓಡಿಹೋಗಿದ್ದಳು ಎನ್ನಲಾಗಿದೆ.

ಐಪಿಸಿ ಸೆಕ್ಷನ್‌ 323 ರ ಅಡಿ ಸ್ವಯಂಪ್ರೇರಣೆಯಿಂದ ಹಾನಿ, ಸೆ. 354B ಅಡಿ ಮಹಿಳೆ ಮೇಲೆ ಹಲ್ಲೆ ಸೇರಿ ಇತರೆ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

Comments are closed.