ರಾಷ್ಟ್ರೀಯ

ದೇವರನಾಡಿನಲ್ಲಿ ಹೀಗೊಂದು ಮರ್ಯಾದಾ ಹತ್ಯೆ

Pinterest LinkedIn Tumblr


ಕೇರಳ: ತನ್ನ ಇಚ್ಛೆಗೆ ವಿರುದ್ಧವಾಗಿ ಮಗಳು ದಲಿತ ಯುವಕನನ್ನು ಮದುವೆಯಾಗುತ್ತಿದ್ದಾಳೆ ಎಂಬ ಕಾರಣಕ್ಕೆ ತಂದೆಯೇ ಪುತ್ರಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ಮಲಪ್ಪುರಂನ ಅರೀಕ್ಕೊಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮದುವೆಯ ಹಿಂದಿನ ದಿನ 22 ವರ್ಷದ ಅಥಿರಾಳನ್ನು ರಾಜನ್ ಹತ್ಯೆ ಮಾಡಿದ್ದಾರೆ. ಮದುವೆ ಕುರಿತು ಜಗಳ ತೆಗೆದ ತಂದೆ ಈ ಮಧ್ಯೆ ಚಾಕುವಿನಲ್ಲಿ ಮಗಳಿಗೆ ಇರಿದಿದ್ದಾನೆ. ತಕ್ಷಣ ಅಥಿರಾಳನ್ನು ಆಸ್ಪತ್ರೆಗೆ ಕರೆದೊಯ್ಯುಲಾಯಿತಾದರೂ, ಮಾರ್ಗ ಮಧ್ಯೆಯೇ ಅಥಿರಾ ಮೃತಪಟ್ಟಿದ್ದಾಳೆ.

ಈ ಸಂಬಂಧ ಅರೀಕ್ಕೊಡು ಪೊಲೀಸ್ ಠಾಣೆಯಲ್ಲೆ ಪ್ರಕರಣ ದಾಖಲಾಗಿದ್ದು, ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರಾಜನ್​ರನ್ನು ಕೇರಳ ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.

Comments are closed.