ರಾಷ್ಟ್ರೀಯ

ಗುಜರಾತ್​ನ ಪಾಕ್​ ಗಡಿಯಲ್ಲಿ ವಾಯುನೆಲೆ ಸ್ಥಾಪನೆಗೆ ಕೇಂದ್ರದ ಗ್ರೀನ್​ ಸಿಗ್ನಲ್​

Pinterest LinkedIn Tumblr


ನವದೆಹಲಿ: ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ಸೇನೆಯ ಬಲವರ್ಧನೆಯ ಭಾಗವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಗುಜರಾತ್​ನ ಪಾಕ್​ ಗಡಿಯಲ್ಲಿ ಭಾರತೀಯ ವಾಯುಪಡೆಯ ವಾಯುನೆಲೆ ಸ್ಥಾಪಿಸಲು ಕ್ಯಾಬಿನೆಟ್​ ಕಮಿಟಿ ಆನ್​ ಸೆಕ್ಯುರಿಟಿ (ಸಿಸಿಎಸ್​) ಒಪ್ಪಿಗೆ ಸೂಚಿಸಿದೆ.

ಗುಜರಾತ್​ನ ಬನಸ್ಕಾಂತಾ ಜಿಲ್ಲೆಯ ದೀಸಾದಲ್ಲಿರುವ ಚಿಕ್ಕ ವಿಮಾನ ನಿಲ್ದಾಣವನ್ನು ಸುಮಾರು 1000 ಕೋಟಿ ರೂ. ವೆಚ್ಚದಲ್ಲಿ ವಾಯುನೆಲೆಯಾಗಿ ಅಭಿವೃದ್ಧಿ ಪಡಿಸಲು ಒಪ್ಪಿಗೆ ನೀಡಲಾಗಿದೆ. 1000 ಮೀಟರ್​ ರನ್​ ವೇ ಇರುವ ವಿಮಾನ ನಿಲ್ದಾಣವನ್ನು ಹೆಲಿಕ್ಯಾಪ್ಟರ್​ ಇಳಿಸಲು ಮತ್ತು ವಿವಿಐಪಿಗಳ ಓಡಾಡಕ್ಕಾಗಿ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಹಾಗಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಈ ವಿಮಾನ ನಿಲ್ದಾಣವನ್ನು ವಾಯುನೆಲೆಯಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ಧಾರೆ.

ಬರ್ಮೀರ್​ ಮತ್ತು ಭುಜ್​ ವಾಯು ನೆಲೆಗಳಗಳ ನಡುವೆ ಇರುವ ದೀಸಾ ವಿಮಾನ ನಿಲ್ದಾಣ ಗಡಿ ರಕ್ಷಣೆಯ ದೃಷ್ಟಿಯಿಂದ ಮಹತ್ವದ ಸ್ಥಾನ ಪಡೆದಿದೆ. ಭಾರತೀಯ ವಾಯುಪಡೆ ಹಲವು ವರ್ಷಗಳಿಂದ ಈ ದೀಸಾ ವಾಯುನೆಲೆಗಾಗಿ ಒತ್ತಾಯಿಸುತ್ತಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ ಎಂದು ನಿವೃತ್ತ ಏರ್​ ಮಾರ್ಷಲ್​ ವಿನೋದ್ ಪಟ್ನಿ ಅವರು ತಿಳಿಸಿದ್ದಾರೆ.

Comments are closed.