ರಾಷ್ಟ್ರೀಯ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: JNU ಪ್ರೊಫೆಸರ್‌ ಅರೆಸ್ಟ್‌

Pinterest LinkedIn Tumblr


ಹೊಸದಿಲ್ಲಿ : ಅನೇಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾದ ಜವಾಹರಲಾಲ್‌ ಯುನಿವರ್ಸಿಟಿಯ ಪ್ರೊಫೆಸರ್‌ ಅತುಲ್‌ ಜೋಹ್ರಿ ಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ಹೊಸದಿಲ್ಲಿ ವಲಯದ ಜಂಟಿ ಪೊಲೀಸ್‌ ಕಮಿಷನರ್‌ ಅಜಯ್‌ ಚೌಧರಿ ಅವರು ಜೆಎನ್‌ಯು ಪ್ರೊ. ಅತುಲ್‌ ಜೋಹ್ರಿಯ ಬಂಧನವನ್ನು ದೃಢೀಕರಿಸಿದ್ದಾರೆ. ಆರೋಪಿಯನ್ನು ಅನಂತರ ಕೋರ್ಟಿನಲ್ಲಿ ಹಾಜರು ಪಡಿಸಲಾಯಿತು ಎಂದು ತಿಳಿಸಿದ್ದಾರೆ.

ಕಳೆದೆರಡು ದಿನಗಳಿಂದ ವಿವಿ ವಿದ್ಯಾರ್ಥಿನಿಯರು ಆರೋಪಿ ಪ್ರೊಫೆಸರ್‌ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಜೋಹ್ರಿ ಕೆಲಸ ಮಾಡಿಕೊಂಡಿದ್ದ ಸ್ಕೂಲ್‌ ಆಫ್ ಲೈಫ್ ಸಯನ್ಸಸ್‌ಗೆ ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಬೀಗ ಹಾಕಿದ್ದರು.

ಎಂಟು ವಿದ್ಯಾರ್ಥಿನಿಯರು ತಮಗೆ ಆರೋಪಿಯಿಂದ ಲೈಂಗಿಕ ಕಿರುಕುಳವಾಗಿದೆ ಎಂದು ದೂರಿದ ನಾಲ್ಕು ದಿನಗಳ ತರುವಾಯವೂ ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ; ಕೇವಲ ಒಂದು ಎಫ್ಐಆರ್‌ ಮಾತ್ರವೇ ದಾಖಲಾಗಿತ್ತು ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಸಿಮೋನ್‌ ಝೋ ಖಾನ್‌ ಈ ಮೊದಲು ಹೇಳಿದ್ದರು.

-ಉದಯವಾಣಿ

Comments are closed.