ಮನೋರಂಜನೆ

ನನ್ನ ಹಿಂದೆ ಬಿಜೆಪಿಯಿಲ್ಲ, ದೇವರು ಮತ್ತು ಜನರಿದ್ದಾರೆ : ರಜನಿಕಾಂತ್

Pinterest LinkedIn Tumblr


ಚೆನ್ನೈ: ನನ್ನ ಹಿಂದೆ ಬಿಜೆಪಿಯಿಲ್ಲ, ಬದಲಾಗಿ ನನಗೆ ಬೆನ್ನೆಲುಬಾಗಿ ಇರುವವರು ದೇವರು ಮತ್ತು ಜನರು ಎಂದು ನಟ, ರಾಜಕಾರಣಿ ರಜನೀಕಾಂತ್ ತಿಳಿಸಿದ್ದಾರೆ.

ಆಧ್ಯಾತ್ಮಿಕ ಯಾತ್ರೆ ಮುಗಿಸಿ ಮರಳಿ ಮಾಧ್ಯಮಗಳ ಜತೆಗೆ ಮಾತನಾಡಿದ ರಜನಿ, ನಾನು ದೇವರು ಮತ್ತು ಜನರನ್ನು ನಂಬಿ ರಾಜಕೀಯಕ್ಕೆ ಇಳಿದಿದ್ದೇನೆಯೇ ಹೊರತು, ಯಾವುದೇ ಪಕ್ಷವನ್ನು ನಂಬಿ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಕಾವೇರಿ ವ್ಯಾಜ್ಯ ಪರಿಹಾರಕ್ಕಾಗಿ ರಾಜ್ಯ ಸರಕಾರ ಕೇಂದ್ರದ ಗಮನಕ್ಕೆ ತರಲು ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ತಿಳಿಸಿದರು.

ಪ್ರವಾಸದ ಸಂದರ್ಭದಲ್ಲಿ ಬಿಜೆಪಿ ನಾಯಕರ ಭೇಟಿ ಮತ್ತು ಬೆಂಬಲದ ಬಗ್ಗೆ ಇದ್ದ ಕುತೂಹಲಕ್ಕೆ ರಜನಿ ತೆರೆ ಎಳೆದಿದ್ದು ಬಿಜೆಪಿಯ ಬೆಂಬಲವಿದೆ ಎಂಬ ಮಾತನ್ನು ನಿರಾಕರಿಸಿದರು. ಮಂಗಳವಾರ ತಮಿಳುನಡಿಗೆ ಆಗಮಿಸಿದ ರಾಮ ರಾಜ್ಯ ರಥ ಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ತಲೈವಾ ಸರಕಾರ ಜಾತ್ಯಾತೀತ ಭದ್ರತೆ ನೀಡಬೇಕು ಮತ್ತು ಸಾಮುದಾಯಿಕ ಸ್ಪೋಟವನ್ನು ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಹಾಗೆಯೇ, ತಮ್ಮ ಮುಂದಿನ ರಾಜಕೀಯ ಯೊಜನೆಗಳನ್ನು ತಮ್ಮ ಪಕ್ಷದ ಕಚೇರಿ ಗೊತ್ತು ಪಡಿಸಿದ ಬಳಿಕ ತಿಳಿಸಲಾಗುವುದು ಎಂದು ಹೇಳಿದರು.

Comments are closed.