ರಾಷ್ಟ್ರೀಯ

ಭಾರತೀಯ ವಾಯುಸೇನೆಯ ವಿಮಾನ ಪತನ: ದಗದಗನೆ ಹೊತ್ತಿ ಉರಿದ ವಿಮಾನ

Pinterest LinkedIn Tumblr

ನವದೆಹಲಿ: ಭಾರತೀಯ ವಾಯುಪಡೆಯ ಹಾಕ್ ಸುಧಾರಿತ ತರಬೇತಿ ವಿಮಾನ ಒಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿ ಪತನಗೊಂಡಿದೆ.

ಐಎಎಫ್ ವಿಮಾನದಲ್ಲಿ ತರಬೇತಿ ಪಡೆಯುತ್ತಿದ್ದ ಪೈಲಟ್ ವಿಮಾನದಿಂದ ಸುರಕ್ಷಿತವಾಗಿ ಹೊರ ಹಾರಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ.

ಜಾರ್ಖಂಡ್ ಗಡಿಯ ಸಮೀಪ ವಿಮಾನ ಪತನಗೊಂಡಿದೆ. ಖರಗ್ ಪುರದ ಕಲಾಯಿಕುಂಡ ವಾಯುನೆಲೆಯಿಂದ ಈ ಜೆಟ್ ತರಬೇತಿ ಹಾರಾಟ ಆರಂಭಿಸಿತ್ತು. ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Comments are closed.