ರಾಷ್ಟ್ರೀಯ

ಬಹುಕೋಟಿ ಮೇವು ಹಗರಣದ 4ನೇ ಪ್ರಕರಣದಲ್ಲಿಯೂ ಲಾಲುಪ್ರಸಾದ್ ದೋಷಿ

Pinterest LinkedIn Tumblr


ರಾಂಚಿ: ಬಹುಕೋಟಿ ಮೇವು ಹಗರಣದ ನಾಲ್ಕನೇ ಪ್ರಕರಣದಲ್ಲಿಯೂ ಆರ್ ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ದೋಷಿ ಎಂದು ರಾಂಚಿಯ ಸಿಬಿಐ ವಿಶೇಷ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಿದೆ.

4ನೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ, ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರನ್ನು ಕೋರ್ಟ್ ಖುಲಾಸೆಗೊಳಿಸಿದೆ.

ಲಾಲೂಪ್ರಸಾದ್ ಯಾದವ್ ಗೆ ಈಗಾಗಲೇ ಈಗಾಗಲೇ ಸಿಬಿಐ ವಿಶೇಷ ಕೋರ್ಟ್ 3 ಮೇವು ಹಗರಣದಲ್ಲಿ ದೋಷಿ ಎಂದು ತೀರ್ಪು ನೀಡಿ, ಶಿಕ್ಷೆ ವಿಧಿಸಿತ್ತು. ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ, ಮಾಜಿ ಐಎಎಸ್ ಅಧಿಕಾರಿಗಳು, ಕೆಲವು ಅಧಿಕಾರಿಗಳು ಸೇರಿದಂತೆ 29 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.

1995ರಿಂದ 1996ರ ನಡುವೆ ದುಮ್ಕಾ ಖಜಾನೆಯಿಂದ 3.13 ಕೋಟಿ ರೂಪಾಯಿ ಹಣವನ್ನು ತೆಗೆದಿರುವ ಪ್ರಕರಣದಲ್ಲಿ ಇವರೆಲ್ಲಾ ಆರೋಪಿಗಳಾಗಿದ್ದರು.

-ಉದಯವಾಣಿ

Comments are closed.