ರಾಷ್ಟ್ರೀಯ

ತಾಯಿಯ ತಲೆ ಕತ್ತರಿಸಿ ರುಂಡದೊಂದಿಗೆ ಪೊಲೀಸರಿಗೆ ಶರಣಾದ ಪುತ್ರ!

Pinterest LinkedIn Tumblr

ಪುದುಕೋಟೈ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ತಾಯಿಯೊಂದಿಗೆ ಜಗಳ ಮಾಡಿದ್ದ ಮಗ ಬಳಿಕ ಆಕೆಯ ತಲೆ ಕತ್ತರಿಸಿ ರುಂಡದೊಂದಿಗೆ ಪೊಲೀಸರಿಗೆ ಶರಣಾಗಿರುವ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಕರಂಬಕುಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಸುಮಾರು ಮೂವತ್ತು ವರ್ಷದ ವ್ಯಕ್ತಿಯೋರ್ವ ಆಸ್ತಿ ವಿಚಾರದ ಕುರಿತು ತನ್ನ ತಾಯಿಯೊಂದಿಗೆ ಜಗಳ ಮಾಡಿದ್ದು, ಜಗಳ ತಾರಕಕ್ಕೇರಿ ಆಕೆಯ ತಲೆಯನ್ನೇ ಕತ್ತರಿಸಿ ಹಾಕಿದ್ದಾನೆ. ಅಲ್ಲದೆ ತಾಯಿಯ ರುಂಡವನ್ನು ಕೈಯಲ್ಲಿ ಹಿಡಿದು ಪೊಲೀಸರಿಗೆ ಶರಣಾಗಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ ಆನಂದ ಎಂಬಾತ ಈ ಕೃತ್ಯ ಎಸಗಿದ್ದು, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆಯಾದ ರಾಣಿ ವಿಧವೆಯಾಗಿದ್ದು, ಮೃತ ಮಹಿಳೆ 10 ವರ್ಷಗಳ ಹಿಂದೆ ತನ್ನ ಗಂಡನ ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದರು.

ಇನ್ನು ಆಕೆಯ ಮಗ ಆನಂದ್ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಿಸಿ ಆಗಾಗ ಜಗಳ ನಡೆಯುತ್ತಿತ್ತು. ಇಂದು ಅವರ ನಡುವಿನ ಜಗಳ ತಾರಕಕ್ಕೇರಿ ರಾಣಿಯ ಕೊಲೆಯೊಂದಿಗೆ ಜಗಳ ಕೊನೆಗೊಂಡಿದೆ. ಆಸ್ತಿ ವಿಚಾರಕ್ಕ ಸಂಬಂಧಿಸಿ ರಾಣಿ ತನ್ನ ನಿರ್ಧಾರ ಬದಲಿಸದ ಹಿನ್ನಲೆಯಲ್ಲಿ ಆಕ್ರೋಶಗೊಂಡಿದ್ದ ಮಗ ಆನಂದ್ ಹರಿತವಾದ ಕತ್ತಿಯಿಂದ ತನ್ನ ತಾಯಿ ಕುತ್ತಿಗೆ ಕತ್ತರಿಸಿ ಹಾಕಿದ್ದಾನೆ.

ಬೆಳಗ್ಗೆ ತಾಯಿ ರಾಣಿ ಮತ್ತು ಮಗ ಆನಂದ್ ನಡುವೆ ಜಗಳ ಕಂಡು ಬಂದಿದೆ. ತಾಯಿ ಆಸ್ತಿಯ ವಿಚಾರದಲ್ಲಿ ತನ್ನ ನಿಲುವನ್ನು ಸಡಿಲಗೊಳಿಸದ ಹಿನ್ನೆಲೆಯಲ್ಲಿ ಕೋಪಗೊಂಡ ಮಗ ಆನಂದ್ ಹರಿತವಾದ ಕತ್ತಿಯಿಂದ ತಾಯಿಯ ತಲೆಯನ್ನು ಹಾರಿಸಿದ್ದಾನೆ. ಈಗ್ಗೆ ಕೆಲ ತಿಂಗಳ ಹಿಂದಷ್ಟೇ ಚೆನ್ನೈನ ನುಂಗಬಾಕ್ಕಮ್ ರೈಲು ನಿಲ್ದಾಣದಲ್ಲಿ ಭಗ್ನ ಪ್ರೇಮಿಯೋರ್ವ ಸಾರ್ವಜನಿಕರ ಎದುರೇ ಯುವತಿಯೊಬ್ಬಳ ಕತ್ತು ಸೀಳಿ ಕೊಂದು ಹಾಕಿದ್ದ. ಈ ಪ್ರಕರಣ ಹಸಿರಾಗಿರುವಾಗಲೇ ಸ್ವತ ಮಗನೇ ತನ್ನ ತಾಯಿಯ ರುಂಡ ಕತ್ತರಿಸಿ ಹಾಕಿದ್ದಾನೆ.

Comments are closed.