ಉತ್ತರಪ್ರದೇಶ: ಅಯೋಧ್ಯಾ’ ರಾಮಜನ್ಮಭೂಮಿ’ ಹಿಂದುಗಳಿಂದ ಇನ್ನೊಂದು ಬಲಿದಾನ ಕೇಳುತ್ತಿದೆ ಎಂದು ಹೇಳಿರುವ ಬಿಜೆಪಿ ಸಂಸದ ವಿನಯ್ ಕಟಿಯಾರ್ ವಿವಾದ ಸೃಷ್ಟಿಸಿದ್ದಾರೆ.
1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಕೆಡವಿದ ದಿನ ಅನೇಕ ಕೊಲೆಗಳಾಗಿವೆ. ಈಗ ಮತ್ತೊಂದು ಕ್ರಾಂತಿಗೆ ಮುಂದಾಗಿದ್ದು ಹಿಂದುಗಳು ಸಿದ್ಧರಾಗಬೇಕು ಎಂದು ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಬಾಬ್ರಿ ಮಸೀದಿ ನಾಶ ಘಟನೆ ಸಂದರ್ಭ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಹಿಂದು ಕಾರ್ಯಕರ್ತರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದ ಪರಿಣಾಮ ಅನೇಕ ಸಾವು ಸಂಭವಿಸಿತು. ಈಗ ಮತ್ತೆ ಆ ಆತಂಕ ಎದುರಾಗಿದೆ ಎಂದಿದ್ದಾರೆ.ಸಮಸ್ಯೆ ಇತ್ಯರ್ಥಕ್ಕೆ ಯತ್ನ ಮಾಡಿದ್ದೆ, ಬೇರೆ ದಾರಿ ಇಲ್ಲದೇ ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ: ಶಮಿ
ಕೋಲ್ಕತಾ: ಪತ್ನಿ ಹಸೀನ್ ಜಹಾನ್ ಳೊಂದಿಗಿನ ಸಮಸ್ಯೆ ಇತ್ಯರ್ಥಕ್ಕೆ ನಾನು ಸಕಲ ರೀತಿಯ ಪ್ರಯತ್ನ ಮಾಡಿದ್ದೆ. ಆದರೆ ಆಕೆ ಪೂರಕವಾಗಿ ಪ್ರತಿಕ್ರಿಯಿಸುತ್ತಿಲ್ಲ. ಹೀಗಾಗಿ ನಾನು ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ ಎಂದು ಕ್ರಿಕೆಟಿಗ ಮಹಮದ್ ಶಮಿ ಹೇಳಿದ್ದಾರೆ.
ಶಮಿ ಅವರ ಕೋಲ್ಕತಾ ನಿವಾಸಕ್ಕೆ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದ ಹಿನ್ನಲೆಯಲ್ಲಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಶಮಿ, ಪೊಲೀಸ್ ಅಧಿಕಾರಿಗಳ ವಿಚಾರಣೆಗೆ ನಾವು ಸಂಪೂರ್ಣ ಸಹಕಾ ನೀಡಿದ್ದೇವೆ. ನಾನು ಮತ್ತು ನನ್ನ ಕುಟುಂಬಸ್ಥರು ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ನಮಗೆ ತಿಳಿದ ಉತ್ತರ ನೀಡಿದ್ದೇವೆ ಎಂದು ಹೇಳಿದ್ದಾರೆ.
ಅಂತೆಯೇ ಪತ್ನಿ ಹಸೀನ್ ಜಹಾನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಮಿ, ಕಳೆದ 7-8 ದಿನಗಳಿಂದ ನಾನು ಸಮಸ್ಯೆ ಇತ್ಯರ್ಥಕ್ಕೆ ಸಕಲ ಪ್ರಯತ್ನಗಳನ್ನು ಮಾಡಿದೆ. ಆದರೆ ಆಕೆ ನಮ್ಮ ಯಾವುದೇ ಪ್ರಯತ್ನಕ್ಕೂ ಪೂರಕವಾಗಿ ಪ್ರತಿಕ್ರಿಯಿಸುತ್ತಿಲ್ಲ. ಹಸೀನ್ ಜಹಾನ್ ತಾನು ಮಾಡಿದ ಆರೋಪಗಳ ಪೈಕಿ ಶೇ.50 ರಷ್ಟು ಆರೋಪಗಳನ್ನೂ ಕೂಡ ಸಾಬೀತು ಪಡಿಸಲಾಗಿಲ್ಲ. ನನಗೂ ಸಾಕಾಗಿ ಹೋಗಿದೆ. ಆಕೆ ಯಾವ ಹಂತಕ್ಕೆ ಹೋಗುತ್ತಾಳೆಯೋ ನೋಡೋಣ ನಾನು ಕೂಡ ಅದಕ್ಕೆ ಸಿದ್ಧನಾಗಿದ್ದು, ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂಜು ಹೇಳಿದ್ದಾರೆ.
ನನ್ನ ವೈಯುಕ್ತಿಕ ಬದುಕಿಗೂ ನನ್ನ ವೃತ್ತಿ ಬದುಕಿಗೂ ಯಾವುದೇ ಸಂಬಂಧವಿಲ್ಲ. ನನ್ನ ಕ್ರಿಕೆಟ್ ಬದುಕಿಗೆ ಅಡ್ಡಿ ಪಡಿಸುವ ಉದ್ದೇಶದಿಂದ ಈ ಆರೋಪಗಳನ್ನು ಮಾಡಲಾಗುತ್ತಿದ್ದು, ನನ್ನ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದೇನೆ. ನಾನು ನಿರಪರಾಧಿ ಎಂದು ಸಾಬೀತಾದರೆ ನಾನು ಕ್ರಿಕೆಟ್ ಆಡಲು ಅವಕಾಶ ಮಾಡಿಕೊಂಡಿ ಎಂದು ಶಮಿ ಮನವಿ ಮಾಡಿಕೊಂಡಿದ್ದಾರೆ.
Comments are closed.