ರಾಷ್ಟ್ರೀಯ

ಭಾರತೀಯರಿಗಿಂತ ಪಾಕಿಸ್ತಾನಿಯರು ಸಂತೋಷವಾಗಿದ್ದಾರೆ: ವಿಶ್ವಸಂಸ್ಥೆ ವರದಿ

Pinterest LinkedIn Tumblr


ಹೊಸದಿಲ್ಲಿ: ಜಗತ್ತಿನ ಅತ್ಯಂತ ಸಂತೋಷವಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕಿಂತಲ್ಲೂ ಪಾಕಿಸ್ತಾನ ಮುಂದಿದೆ ಎಂದು ವಿಶ್ವಸಂಸ್ಥೆಯ ಸಂತುಷ್ಟ ವರದಿ ತಿಳಿಸಿದೆ. ಭಾರತೀಯರಿಗಿಂತ ಪಾಕಿಸ್ತಾನಿಯರು ತುಂಬಾ ಖುಷಿಯಾಗಿರುತ್ತಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2017ರಲ್ಲಿ ಭಾರತ ನಾಲ್ಕು ಸ್ಥಾನಗಳಲ್ಲಿ ಕುಸಿದ್ದರೆ 2018ರಲ್ಲಿ 11 ಸ್ಥಾನಗಳಲ್ಲಿ ಕುಸಿತ ಕಂಡಿದೆ. ವಾರ್ಷಿಕ ವರದಿಯಲ್ಲಿ ಒಟ್ಟು 156 ದೇಶಗಳಲ್ಲಿ ಭಾರತದ ರ್‍ಯಾಂಕಿಂಗ್ 133 ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. 2017ರ ರ್‍ಯಾಂಕಿಂಗ್‌ನಲ್ಲೂ ಭಾರತಕ್ಕಿಂತಲೂ ಖುಷಿಯಾಗಿರುವ ದೇಶಗಳಪಟ್ಟಿಯಲ್ಲಿ ಉಗ್ರ ಹಣೆಪಟ್ಟಿ ಹೊತ್ತಿರುವ ಪಾಕಿಸ್ತಾನ ಮುಂದಿತ್ತು. 2018ರಲ್ಲಿ ಪಾಕಿಸ್ತಾನದ ಶ್ರೇಯಾಂಕ ಇನ್ನಷ್ಟು ಹೆಚ್ಚಿರುವುದು ಗಮನಾರ್ಹ.

ಕೇವಲ ಪಾಕಿಸ್ತಾನವಷ್ಟೇ ಅಲ್ಲ ಭಾರತದ ನೆರೆ ರಾಷ್ಟ್ರಗಳ ಸಾಮಾಜಿಕ ಮತ್ತು ಆರ್ಥಿಕವಾಗಿ ಚೆನ್ನಾಗಿಲ್ಲದಿದ್ದರೂ ತುಂಬಾ ಸಂತೋಷವಾಗಿರುವುದು ವಿಶೇಷ. ಬಾಂಗ್ಲಾದೇಶ, ಭೂತಾನ್, ನೇಪಾಳ ಮತ್ತು ಶ್ರೀಲಂಕಾ ಎಲ್ಲವೂ ಭಾರತಕ್ಕಿಂತ ಸಂತೋಷವಾಗಿವೆ. ಕಮುನಿಸ್ಟ್ ಮುಷ್ಟಿಯಲ್ಲಿರುವ ಚೀನಾ ಸಹ ಭಾರತಕ್ಕಿಂತ ಸಂತೋಷವಾಗಿದೆ ಎಂದಿದೆ ವರದಿ.

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಅತ್ಯಂತ ಸಂತೋಷವಾಗಿರುವ 156 ದೇಶಗಳ ಪಟ್ಟಿಯಲ್ಲಿ ಫಿನ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಅಲ್ಲಿನ ಜನರ ಆಯಸ್ಸು, ಸಾಮಾಜಿಕ ಬೆಂಬಲ ಮತ್ತು ಭ್ರಷ್ಟಾಚಾರದಂತಹ ಅಂಶಗಳ ಆಧಾರವಾಗಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

Comments are closed.