ರಾಷ್ಟ್ರೀಯ

ಮದುವೆಯಲ್ಲಿ ಲೆಹೆಂಗಾ ಬದಲು ಜೀನ್ಸ್ ಧರಿಸಿ ಡ್ಯಾನ್ಸ್ ಮಾಡಿದ ವಧು- ವಿಡಿಯೋ ವೈರಲ್

Pinterest LinkedIn Tumblr

ನವದೆಹಲಿ: ಯುವತಿಯೊಬ್ಬಳು ತನ್ನ ಮದುವೆಯಲ್ಲಿ ಲೆಹೆಂಗಾ ಬದಲು ಜೀನ್ಸ್ ಧರಿಸಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿ ವಧುವಿನಂತೆ ತಯಾರಾಗಿದ್ದು, ಆಭರಣಗಳನ್ನು ಸಹ ಧರಿಸಿ, ಲೆಹಂಗಾ ಬದಲು ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದಾರೆ.

ರಶಿಕಾ ನೃತ್ಯ ಮಾಡಿದ ವಧು. ಗಾಯಕ ಮಂಕ್ರಿತ್ ಔಲಾಖ್ ಹಾಡಿರುವ ‘ಕಾದರ್’ ಪಂಜಾಬಿ ಹಾಡಿಗೆ ರಶಿಕಾ ಹೆಜ್ಜೆ ಹಾಕಿದ್ದಾರೆ. ರಶಿಕಾ ಕೇವಲ ಪಂಜಾಬಿ ಶೈಲಿಯ ಡ್ಯಾನ್ಸ್ ಮಾಡದೇ ಬೆಲ್ಲಿ ಮತ್ತು ಬಾಲಿವುಡ್ ಸ್ಟೆಪ್ ಗಳನ್ನು ಹಾಕಿದ್ದಾರೆ.

ರಶಿಕಾ ಅವರು ಕಥಕ್ ನಲ್ಲಿ ತರಬೇತಿ ಪಡೆದಿದ್ದು, ಕಳೆದ 16 ವರ್ಷಗಳಿಂದ ನೃತ್ಯ ಕಲಿಯುತ್ತಿದ್ದಾರೆ. ಮದುವೆಯ ದಿನವು ನೃತ್ಯವನ್ನು ಮಾಡದೆ ಇರಲು ರಶಿಕಾಗೆ ಸಾಧ್ಯವಾಗಲಿಲ್ಲ. ನಾನು ಅವರ ನೃತ್ಯವನ್ನು ಶೂಟ್ ಮಾಡಲು ನಿರ್ಧರಿಸಿದೆ” ಎಂದು ಡಿಸೈನ್ ಆಕ್ವಾ ಸ್ಟುಡಿಯೋವನ್ನು ನಡೆಸುತ್ತಿರುವ ಛಾಯಾಗ್ರಾಹಕ ಪ್ರಿಯಾಂಕಾ ಕಾಂಬೋಜ್ ಚೋಪ್ರಾ ಅವರು ಖಾಸಗಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಕೇವಲ 20 ಗಂಟೆಗಳಲ್ಲಿಯೇ ಈ ವಿಡಿಯೋ 4.3 ಲಕ್ಷ ವ್ಯೂವ್ ಮತ್ತು ಸುಮಾರು 7,000 ಲೈಕ್ಸ್ ಗಳಿಸಿದೆ. ವಧುವಿನ ವಿಭಿನ್ನ ನೃತ್ಯ ನೋಡಿದವರು ಫನ್ನಿಯಾಗಿ ಕಮೆಂಟ್ ಮಾಡಿದ್ದಾರೆ.

ರಶಿಕಾ ಡ್ಯಾನ್ಸ್ ನೋಡಿದ ಗಾಯಕ ಮಂಕ್ರಿತ್ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಂಕ್ರಿತ್ ವಿಡಿಯೋ ಶೇರ್ ಮಾಡಿಕೊಂಡ ಕೇವಲ ಮೂರು ಗಂಟೆಯಲ್ಲಿ 2.1 ಲಕ್ಷ ವ್ಯೂವ್ ಮತ್ತು 34 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

ಸೋಮವಾರ ಸಂಜೆ ದೆಹಲಿಯಲ್ಲಿ ರಶಿಕಾ ಮತ್ತು ಮಾಯಾಂಕ್ ಮದುವೆ ಆಗಿದ್ದಾರೆ.

Comments are closed.