ರಾಷ್ಟ್ರೀಯ

ಮಾ.23ರಂದು ಅಯೋಧ್ಯೆ ವಿಚಾರಣೆ: ಸುಪ್ರೀಂ

Pinterest LinkedIn Tumblr


ದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ವಿವಾದದ ಕೇಸಿಗೆ ಸಂಬಂಧಿಸಿ ಸಲ್ಲಿಸಲ್ಪಟ್ಟ 32 ಮಧ್ಯಂತರ ಅರ್ಜಿಗಳನ್ನು ವಜಾ ಗೊಳಿಸಿದ ಸುಪ್ರೀಂ ಕೋರ್ಟ್, ವಿಚಾರಣೆ ಯನ್ನು ಮುಂದಿನ 23ಕ್ಕೆ ಮುಂದೂಡಿದೆ.

ಬುಧವಾರ ನಡೆದ ವಿಚಾರಣೆ ಸಂದರ್ಭ, ನ್ಯಾಯಾಲಯ ಶ್ಯಾಮ್ ಬೆನಗಲ್, ಅಪರ್ಣಾ ಸೇನ್, ತೀಸ್ತಾ ಸೆಟಲ್ವಾಡ್ ಹಾಗೂ ಬಿಜೆಪಿಯ ಡಾ.ಸ್ವಾಮಿ ಮುಂತಾದವರು ಸಲ್ಲಿಸಿದ ಮಧ್ಯಂತರ ಅರ್ಜಿಗಳನ್ನು ವಜಾಗೊಳಿಸಿತು.

ಮೂಲ ಕಕ್ಷಿದಾರರ ಭೂ ಮಾಲೀಕತ್ವಕ್ಕೆ ಸಂಬಂಧಿಸಿ ಅರ್ಜಿಗಳನ್ನು ಮಾತ್ರವೇ ವಿಚಾ ರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದ್ದು ಸಂಬಂಧಪಡದ ವ್ಯಕ್ತಿಗಳ ಹಸ್ತಕ್ಷೇಪವನ್ನು ತಿರಸ್ಕರಿಸುತ್ತಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿತು. ಆದರೆ ಅಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸುವ ತನ್ನ ಮೂಲಭೂತ ಹಕ್ಕಿನ ಅನುಷ್ಠಾನ ಕೋರಿ, ಸಲ್ಲಿಸಿರುವ ಅರ್ಜಿ ಗೆ ಮತ್ತೆ ಜೀವ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಮೂಲಕ ಸುಪ್ರೀಂ ಕೋರ್ಟ್ ವಿವಾದ ಕುರಿತಂತೆ ಕಠಿಣ ನಡೆಯನ್ನು ಅನುಸರಿಸಿದೆ.

2010ರಲ್ಲಿ ನಡೆದ ತೀರ್ಪಿನಂತೆ, ಅಲಹಾಬಾದ್ ಹೈ ಕೋರ್ಟ್, 2.77 ಏಕರೆ ವಿವಾದಿತ ಭೂಮಿಯನ್ನು ಸಮನಾಗಿ ಕಕ್ಷಿದಾರರಾದ ರಾಮ್ ಲಲ್ಲಾ, ಸುನ್ನಿ ವಕ್ಫ್ ಮಂಡಳಿ ಮತ್ತು ನಿರ್ಮೋಹಿ ಅಖಾರಾ ನಡುವೆ ವಿಭಜಿಸಿತ್ತು. ನಂತರದ ಬೆಳವಣಿಗೆಯಲ್ಲಿ ಕೋರ್ಟ್ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವಂತೆ ತಿಳಿಸಿತ್ತು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ನ್ಯಾ.ನಜೀಬ್ ರನ್ನೊಳಗೊಂಡ ತ್ರಿಪೀಠ ವಿಚಾರಣೆ ನಡೆಸುತ್ತಿದೆ. 2010ರ ಡಿಸೆಂಬರ್ ನಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು. ಹಾಗೂ ವಿಚಾರಣೆಯನ್ನು ಜುಲೈ 2019ರ ವರೆಗೂ ಮುಂದೂಡುವಂತೆ ಸುನ್ನಿ ವಕ್ಫ್ ಮಂಡಳಿ ಮತ್ತು ಅಲ್ಪಸಂಖ್ಯಾತ ಸಮುದಾಯ ಮಾಡಿದ ಮನವಿಯನ್ನು ತಳ್ಳಿ ಹಾಕಿತ್ತು.

Comments are closed.