ರಾಷ್ಟ್ರೀಯ

ಬಾಲ ಕಾರ್ಮಿಕ ವೃತ್ತಿಗೆ ಅಪ್ಪನಿಂದ ಒತ್ತಾಯ; ಮಕ್ಕಳಿಂದ ದೂರು

Pinterest LinkedIn Tumblr


ಮಥುರಾ: ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಕಳುಹಿಸುವ ಬದಲು ಬಾಲ ವೃತ್ತಿ ಮಾಡುವಂತೆ ಒತ್ತಾಯಿಸಿದ ಅಪ್ಪನ ವಿರುದ್ಧ ಮಕ್ಕಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಶಾಲೆಗೆ ಹೋಗಲು ಬಿಡದ ಅಪ್ಪ ಇಬ್ಬರು ಮಕ್ಕಳನ್ನು ಬಾಲ ಕಾರ್ಮಿಕ ವೃತ್ತಿಯನ್ನು ಮಾಡಲು ಒತ್ತಾಯಿಸುತ್ತಿದ್ದರು. ಅಪ್ಪನ ಕಿರುಕುಳವನ್ನು ತಾಳಲಾರದ ಅಮ್ಮ, ಮಕ್ಕಳನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಗೋವಿಂದ್ ನಗರ ಟಪೊಲೀಸ್ ಠಾಣೆಯಲ್ಲಿ ಎಂಟರ ಹರೆಯದ ಮಗ ಹಾಗೂ ಏಳರ ಹರೆಯದ ಮಗಳು, ಅಪ್ಪ ದಿಲ್ಶಾದ್ ವಿರುದ್ಧ ದೂರು ನೀಡಿದ್ದಾರೆ.

ಅಮ್ಮ ಕಾರ್ಖಾನೆಯೊಂದರಲ್ಲಿ ದುಡಿಯುತ್ತಿದ್ದು, ಶಾಲೆಯಲ್ಲಿ ಮಕ್ಕಳ ಶುಲ್ಕವನ್ನೆಲ್ಲ ಭರಿಸುತ್ತಿದ್ದಾರೆ. ಅತ್ತ ಅಪ್ಪ ಕುಡಿಯುವ ಚಟಕ್ಕೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.