ರಾಷ್ಟ್ರೀಯ

4 ಸಾವಿರ ಕೋಟಿ ರೂ. ನ ಅತ್ಯಂತ ಶ್ರೀಮಂತ ರಾಜ್ಯಸಭಾ ಅಭ್ಯರ್ಥಿ ಯಾರು ಗೊತ್ತಾ?

Pinterest LinkedIn Tumblr


ಪಾಟ್ನಾ: ಏಳನೇ ಅವಧಿಗೆ ರಾಜ್ಯಸಭೆ ಪ್ರವೇಶಿಸಲು ಸಿದ್ದವಾಗಿರುವ ಕಿಂಗ್‌ ಮಹೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಬಿಹಾರದ ಮಹೇಂದ್ರ ಪ್ರಸಾದ್‌ ಅವರು ರಾಜ್ಯಸಭಾ ಅಭ್ಯರ್ಥಿಗಳಲ್ಲೇ ಶ್ರೀಮಂತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

78 ವರ್ಷದ ಮಹೇಂದ್ರ ಅವರು ಜೆಡಿಯು ಅಭ್ಯರ್ಥಿಯಾಗಿ ಮೂರನೇ ಬಾರಿಗೆ ಬಿಹಾರದಿಂದ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಅಫಿಡವಿಟ್‌ನಲ್ಲಿ ಚರ ಸ್ವತ್ತಾಗಿ 4,010.21 ಕೋಟಿ ರೂ. ಮತ್ತು ಸ್ಥಿರ ಸ್ವತ್ತಾಗಿ 29.1 ಕೋಟಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ಎರಡು ಔಷಧ ಕಂಪನಿಗಳನ್ನು ಹೊಂದಿರುವ ಡಾ. ಪ್ರಸಾದ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,239 ಕೋಟಿ ರೂ. ಹಣವನ್ನು ಠೇವಣಿ ಇಟ್ಟಿದ್ದಾರೆ. ಈ ಬಿಲಿಯನೇರ್‌ ವ್ಯಕ್ತಿ ಬಳಿ ಯಾವುದೇ ವಾಹನ ಮತ್ತು ಇನ್ಷೂರೆನ್ಸ್‌ ಪಾಲಿಸಿಗಳಿಲ್ಲ ಬದಲಿಗೆ ಕೇವಲ 41 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮಾತ್ರ ಹೊಂದಿದ್ದಾರೆ.

1980 ರಲ್ಲಿ ಮೊದಲ ಬಾರಿಗೆ ಜೆಹನಾಬಾದ್‌ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಪ್ರವೇಶ ಪಡೆದ ಪ್ರಸಾದ್‌, 1984ರ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಭವಗೊಂಡರು. 1985ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ರಾಜ್ಯಸಭೆಗೆ ಚುನಾಯಿತರಾದರು. ಅಂದಿನಿಂದ ಕಾಂಗ್ರೆಸ್‌, ಆರ್‌ಜೆಡಿ ಮತ್ತು ಜೆಡಿ(ಯು)ನಿಂದ ನಾಮನಿರ್ದೇಶಿತರಾಗಿ ಮೇಲ್ಮನೆ ಸದಸ್ಯರಾಗಿದ್ದಾರೆ.

ಅತಿ ಹೆಚ್ಚು ವಿದೇಶ ಪ್ರವಾಸ ಮಾಡಿದ ಸಂಸದರಾಗಿ ಗುರುತಿಸಿಕೊಂಡಿರುವ ಪ್ರಸಾದ್‌, ಇದುವರೆಗೂ ಸುಮಾರು 211 ದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಯುನೈಟೆಡ್‌ ಕಿಂಗಡಮ್‌ ಸೇರಿದಂತೆ ಇತರೆ 10 ಯುನೈಟೆಡ್ ಸ್ಟೇಟ್ಸ್‌ಗಳಿಗೆ ಭೇಟಿ ನೀಡಿದ್ದಾರೆ. ಏಪ್ರಿಲ್‌ 2002ರಿಂದ 2003ರ ಅವಧಿಯಲ್ಲಿಯೇ ಸುಮಾರು 84 ದೇಶಗಳಿಗೆ ಭೇಟಿ ನೀಡಿದ್ದಾರೆ.

Comments are closed.