ಕ್ರೀಡೆ

ಶಮಿ ವಿರುದ್ದ ಮ್ಯಾಚ್ ಫಿಕ್ಸಿಂಗ್ ಆರೋಪ: ತನಿಖೆ

Pinterest LinkedIn Tumblr


ಮುಂಬೈ: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ವಿರುದ್ದದ ಆತನ ಪತ್ನಿ ಹಸಿನಾ ಜಹಾನ್ ಮಾಡಿರುವ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ(ಎಸಿಯು)ಆಡಳಿತಾಧಿ ಕಾರಿಗಳ ಸಮಿತಿ ತಿಳಿಸಿದೆ.

ಸುಪ್ರೀಂಕೋರ್ಟಿನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ)ಮುಖ್ಯಸ್ಥ ವಿನೋದ್ ರಾಯ್ ಎಸಿಯು ಮುಖ್ಯಸ್ಥ ನೀರಜ್ ಕುಮಾರ್ ಗೆ ಈ-ಮೇಲ್ ಕಳುಹಿಸಿ, ಆರೋಪವನ್ನು ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ಒಪ್ಪಿಸುವಂತೆ ಸೂಚಿಸಿದ್ದಾರೆ.

ಶಮಿ ಹಾಗೂ ಆತನ ಪತ್ನಿ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೋ ಧ್ವನಿಮುದ್ರಣವನ್ನು ಸಿಒಎ ಆಲಿಸಿದೆ. ಆಡಿಯೋ ರೆಕಾರ್ಡ್ನಲ್ಲಿ ”ಮುಹಮ್ಮದ್ ಭಾಯ್” ಎಂಬ ಹೆಸರಿನಿಂದ ಇನ್ನೊಬ್ಬ ವ್ಯಕ್ತಿ ಅಲಿಸ್ಬಾ ಎಂಬ ಹೆಸರಿನ ಪಾಕ್ ಮಹಿಳೆ ಮೂಲಕ ಹಣ ಕಳುಹಿಸಿದ್ದಾನೆಂದು ಹೇಳಿಕೊಳ್ಳುವ ವ್ಯಕ್ತಿ ಶಮಿ ಎಂದು ಹೇಳಲಾಗುತ್ತಿದೆ.

ಶಮಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದು, ಇಂಗ್ಲೆಂಡ್ ಮೂಲದ ಮುಹಮ್ಮದ್ ಭಾಯ್ ಎಂಬಾತ ಮನವೊಲಿಸಿದ ಬಳಿಕ ಪಾಕಿಸ್ತಾನದ ಮಹಿಳೆ ಅಲಿಸ್ಬಾರಿಂದ ಹಣ ಪಡೆದಿದ್ದಾರೆ ಎಂದು ಜಹಾನ್ ಗಂಭೀರ ಆರೋಪ ಮಾಡಿದ್ದಾರೆ. ಬಿಸಿಸಿಐ ಭ್ರಷ್ಟಾ ಚಾರ ನಿಗ್ರಹ ಘಟಕದ ಮೂಲಕ ತನಿಖೆ ನಡೆಸಬೇಕಾಗಿದೆ ಎಂದು ರಾಯ್ ತಿಳಿಸಿದ್ದಾರೆ.

Comments are closed.