ಹೊಸದಿಲ್ಲಿ: ಬಂಗಾಲ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿರುವ ಕಾರಣ ಮುಂದಿನ ಎರಡು ದಿನಗಳಲ್ಲಿ, ಅಂದರೆ ಮಾರ್ಚ್ 13 ಮತ್ತು 14ರಂದು ಕೇರಳ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ.
ಕೇರಳ ಕರಾವಳಿಯಲ್ಲಿ ಉಂಟಾಗುವ ಮಳೆಯು ಮುಂದೆ ಅರಬ್ಬೀ ಸಮುದ್ರದ ಆಗ್ನೇಯ ಭಾಗವಾಗಿರುವ ಮಾಲ್ದೀವ್ಸ್ ಕರಾವಳಿಗೂ ವ್ಯಾಪಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಮುಂಜಾಗ್ರತೆ ವಹಿಸುವಂತೆ, ಸಮುದ್ರ ಹೆಚ್ಚು ಪ್ರಕ್ಷುಬ್ಧ ವಾಗಿರುವುದರಿಂದ ಮೀನುಗಾರರು ಮಾರ್ಚ್ 15ರ ವರೆಗೂ ಕಡಲಿಗೆ ಇಳಿಯದಂತೆಯೂ ಎಚ್ಚರಿಕೆ ನೀಡಲಾಗಿದೆ.
-ಉದಯವಾಣಿ