ರಾಷ್ಟ್ರೀಯ

ಮತ್ತೆ ಹಿಮಾಲಯಕ್ಕೆ ತೆರಳಿದ ರಜನಿ: ಗುಹೆಯ ಭೇಟಿಯ ಹಿಂದಿನ ಗುಟ್ಟೇನು?

Pinterest LinkedIn Tumblr


ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಈಗಾಗಲೇ ತಮಿಳುನಾಡು ರಾಜಕೀಯರಂಗಕ್ಕೆ ಪ್ರವೇಶಿಸಿದ್ದಾರೆ. ಏತನ್ಮಧ್ಯೆ ರಜನಿಕಾಂತ್ ಅವರು ಹಿಮಾಲಯಕ್ಕೆ ತೆರಳಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಕಳೆದ ಒಂದು ದಶಕಗಳಿಗಿಂತಲೂ ಹಿಂದೆ ಹಿಮಾಲಯಕ್ಕೆ ಹೋಗಿ ಧ್ಯಾನದಲ್ಲಿ ಮಗ್ನರಾಗುವ ಸಂಪ್ರದಾಯ ತಲೈವಾ ಅವರದ್ದಾಗಿದೆ. ಅವಕಾಶ ಸಿಕ್ಕಾಗೆಲ್ಲಾ ಹಿಮಾಲಯಕ್ಕೆ ತೆರಳುವ ರಜನಿ ಶನಿವಾರ ಬೆಳಗ್ಗೆ ರಜನಿಕಾಂತ್ ಅವರು ಉತ್ತರಾಖಂಡ್ ನಲ್ಲಿರುವ ದುನಾಗಿರಿಯತ್ತ ತೆರಳಿದ್ದಾರೆ. ದುನಾಗಿರಿಯಲ್ಲಿ ರಜನಿಕಾಂತ್ ಅವರು ಧ್ಯಾನ ಹಾಗೂ ಸಂತರ ಜತೆ ಕಾಲ ಕಳೆಯಲಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಹೆಚ್ಚಿನ ವಿವರವನ್ನೇನೂ ನೀಡಿಲ್ಲ. ತಾನು ಸುಮಾರು 2 ವಾರಗಳ ಕಾಲ ದೂರ ಇರಲಿದ್ದೇನೆ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

ಈ ಹಿಂದಿನ ಹಿಮಾಲಯ ಭೇಟಿಯ ನಂತರ ಕಾಕತಾಳೀಯ ಎಂಬಂತೆ ರಜನಿಕಾಂತ್ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಪ್ರಸಕ್ತ ವರ್ಷದಲ್ಲಿ ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸಿದ್ದಾರೆ. ಅದರಲ್ಲಿ ಯಶ ಕಾಣಲು ತೆರಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಬಿಗ್ ಬಜೆಟ್ ನ ಸಿನಿಮಾಗಳಾದ ಕಾಲಾ ಮತ್ತು 2.0 ಸಿನಿಮಾ ತೆರೆಕಾಣಲು ಸಿದ್ಧವಾಗಿದೆ.

ತಲೈವರ್ ಅವರು ಧ್ಯಾನಕೇಂದ್ರದಲ್ಲಿ ಸಮಯ ಕಳೆಯಲಿದ್ದಾರೆ ಎಂದು ವರದಿ ಹೇಳಿದೆ. ಹಿಮಾಲಯದ ಬುಡದಲ್ಲಿ ಭಾರತೀಯ ಯೋಗ ಸತ್ಸಂಗ ಸಮಾಜ ನೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ರಜನಿ ಪಾಲ್ಗೊಳ್ಳಲಿದ್ದಾರೆ. ಈ ಸಮಾಜವನ್ನು 1917ರಲ್ಲಿ ಪರಮಹಂಸ ಯೋಗಾನಂದ ಅವರು ಸ್ಥಾಪಿಸಿದ್ದರು.

ರಜನಿಕಾಂತ್ ಅವರು ಪುರಾತನ ಸ್ವಾಮೀಜಿ ಎಂದೇ ಹೇಳಲಾಗುತ್ತಿರುವ ಮಹಾವತಾರ್ ಬಾಬಾಜಿ ಅವರ ಗುಹೆಯತ್ತ ತೆರಳಿದ್ದಾರೆ ಎಂದು ವರದಿ ವಿವರಿಸಿದೆ.

ಯಾರೀ ಬಾಬಾಜಿ:

2000 ಸಾವಿರ ವರ್ಷಗಳಿಂದ ಹಿಮಾಲಯ ಪರ್ವತದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎಂದು ನಂಬಿರುವ ಮಹಾವತಾರ್ ಬಾಬಾಜಿ ಕುರಿತು ಯಾವುದೇ ಐತಿಹಾಸಿಕ ಉಲ್ಲೇಖಗಳು ಲಭ್ಯವಿಲ್ಲ.ಆದರೆ ಪರಮಹಂಸ ಯೋಗಾನಂದರ ಆತ್ಮಕಥೆಯಲ್ಲಿ ಇವರ ಕುರಿತಾಗಿ ಹೇಳಿರುವಂತಹ ವಿಷಯಗಳೇ ಇವರ ಇರುವಿಕೆಗೆ ಇರುವ ದಾಖಲೆಗಳಾಗಿದೆ. ಇವರ ಪ್ರಕಾರ ಬಾಬಾಜಿಯವರು ಒಬ್ಬ ಅವತಾರ ಪುರುಷರಾಗಿದ್ದು, ಸಹಸ್ರಾರು ವರ್ಷಗಳಿಂದ ಜೀವಂತವಾಗಿದ್ದಾರೆ. ಇವರು ಕೇವಲ ಕೆಲವರಿಗೆ ಮಾತ್ರ ಕಾಣಿಸಿಕೊಳ್ಳುತ್ತಾರೆ ಎಂದು ನಂಬಲಾಗಿದೆ.

-ಉದಯವಾಣಿ

Comments are closed.